'ವಿವಾದ ಕೇಳಿ ಬಂದರೆ ಅಮ್ಮನಿಗೆ ಚಿಂತೆಯಾಗುತ್ತದೆ': ಸೋನಾಕ್ಷಿ ಸಿನ್ಹಾ

ಶುಕ್ರವಾರ, 26 ಆಗಸ್ಟ್ 2016 (11:28 IST)
ವೃತ್ತಿಯಲ್ಲಿ ವಿವಾದಗಳು ಸಹಜ. ನನ್ನ ಬಗ್ಗೆ ಯಾವುದಾದರೂ ವಿವಾದ ಕೇಳಿ ಬಂದರೆ ಅಮ್ಮ ಪೂನಂ ಸಿನ್ಹಾಗೆ ಚಿಂತೆಯಾಗುತ್ತದೆಯಂತೆ ಹೀಗಂತ ಸೋನಾಕ್ಷಿ ಸಿನ್ಹಾ ತಿಳಿಸಿದ್ದಾರೆ.


ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಅವರ ತಾಯಿ ಪೂನಂ ಸಿನ್ಹಾಗೆ ಮೊದಲು ಚಿಂತೆಯಾಗುತ್ತದೆ ಎಂದು ತಿಳಿಸಿದ್ದಾರೆ.ಇತ್ತೀಚೆಗೆ ಸೋನಾಕ್ಷಿ ಬಾಯ್‌ಫ್ರೆಂಡ್ ಜತೆಗೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವದಂತಿ ಕೇಳಿ ಬಂದಿತ್ತು. ಮದುವೆ ಆಗಿ ಸೋನಾಕ್ಷಿ ಸೆಟ್ಲ್ ಆಗ್ತಾರೆ ಎಂದು ಹೇಳಲಾಗ್ತಿತ್ತು. 
 
ವಾಸ್ತವವಾಗಿ ನನ್ನ ತಂದೆಗೆ ತೊಂದರೆಯಾಗುವುದಿಲ್ಲ. ನನ್ನಗಿಂತ ಹೆಚ್ಚಾಗಿ ಅವರು ವಾಸ್ತವವಾಗಿ ಯೋಚನೆ ಮಾಡುತ್ತಾರೆ ಎಂದು ತಿಳಿಸಿದರು.ಆದ್ರೆ ನನ್ನ ತಾಯಿಗೆ ಚಿಂತೆಯಾಗುತ್ತದೆ. ನಾನೇ ಸಮಾಧಾನಪಡಿಸುತ್ತೇನೆ. ನನ್ನ ಮಗಳ ಬಗ್ಗೆ ಯಾಕೆ ಈ ರೀತಿ ಬರೆಯಲಾಗುತ್ತದೆ ಎಂದು ಅಮ್ಮ ಸದಾ ಚಿಂತೆಯಲ್ಲಿರುತ್ತಾಳೆ. ಮುಂಬರುವ ಚಿತ್ರ 'ಅಕಿರಾ' ಸೋನಾಕ್ಷಿ ಸಿನ್ಹಾ ನಟಿಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 
 

ವೆಬ್ದುನಿಯಾವನ್ನು ಓದಿ