ರಜನಿ ಕಾಂತ್ ಯಾಕೆ ಇಷ್ಟು ಗಡಿಬಿಡಿಯಾಗಿ ಲಿಂಗ ಚಿತ್ರದ ಮುಹೂರ್ತಕ್ಕೆ ಸಿದ್ಧ ಆಗಿದ್ದು?

ಸೋಮವಾರ, 5 ಮೇ 2014 (11:19 IST)
ಸೂಪರ್ ಸ್ಟಾರ್ ರಜನಿಕಾಂತ್ ಅವರ ಬಹು ನಿರೀಕ್ಷಿತ  ಚಿತ್ರ ಕೊಚ್ಚಾಡಿಯನ್ ಬಿಡುಗಡೆ ಆಗುವುದಕ್ಕೆ ಮುನ್ನವೇ ಅವರ ಮೊಮ್ಮಗನ ಹೆಸರನ್ನು ಹೊಂದಿರುವ ಲಿಂಗ ಚಿತ್ರದ ಮುಹೂರ್ತ ಮೈಸೂರಿನಲ್ಲಿ ನಡೆಯಿತು. ಈ ಚಿತ್ರದಲ್ಲಿ ನಟಿಸಲು ರಜನಿ 40 ಕೋಟಿ ರೂಪಾಯಿಗಳನ್ನು  ನಿರ್ಮಾಪಕ ರಾಕ್ಲೈನ್ ವೆಂಕಟೇಶ್ ಅವರ ಬಳಿ ಪಡೆದು  ತುಂಬಾ ಹಡಾವುಡಿಯಾಗಿ ಸಿನಿಮಾದ ಮುಹೂರ್ತ ಮಾಡಿದ ಸುದ್ದಿಯು ಈಗ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದೆ. ಯಾಕಾಗಿ ಇಂತಹ ನಿರ್ಧಾರವನ್ನು ರಜನಿ ಕೈಗೊಂಡರು ಎನ್ನುವ  ಬಗ್ಗೆ ಪರಿಶೀಲಿಸಿದಾಗ ಕಂಡು ಬಂದ ಸತ್ಯ ಹೀಗಿದೆ..
 
ಸಾಮಾನ್ಯವಾಗಿ ರಜನಿ ತಮ್ಮ ಸಿನಿಮ ನಟನೆಗೆಂದು ಸಂಭಾವನೆಯನ್ನು  25 ಕೋಟಿ ರೂಪಾಯಿಗಳನ್ನು ಪಡೆದು ಅದರೊಂದಿಗೆ ಕೆಲವು ಜಾಗಗಳ ಹಕ್ಕನ್ನು ಪಡೆಯುತ್ತಾರೆ. ಆದರೆ ಲಿಂಗ ಚಿತ್ರಕ್ಕೆ ಒಟ್ಟು 40 ಕೋಟಿ ರೂಪಾಯಿಗಳನ್ನು ನೀಡುವಂತೆ ಅವರು ಕಂಡೀಶನ್ ಹಾಕಿದರಂತೆ. ಇದಕ್ಕೆ ಮುಖ್ಯ ಕಾರಣ ಅವರ ಮಗಳು ಸೌಂದರ್ಯ ನಿರ್ಮಿಸಿರುವ ಕೊಚ್ಚಾಡಿಯನ್ ಸಿನಿಮಾ ಎನ್ನುವ ಸುದ್ದಿ ಈಗ ಎಲ್ಲೆಲ್ಲು! ಈ ವಾರ ಬಿಡುಗಡೆ ಆಗುತ್ತಿರುವ ಕೊಚ್ಚಾಡಿಯನ್ ಸಿನಿಮಾ ಮಾರ್ಕೆಟ್ ವಿಷಯದಲ್ಲಿ   ನಿರೀಕ್ಷಿಸಿದಂತೆ ಸದ್ದು ಮಾಡಿಲ್ಲವಂತೆ . ಕೊಚ್ಚಾಡಿಯನ್ ಚಿತ್ರದ ನಿರ್ಮಾಪಕಿಯರಲ್ಲಿ ರಜನಿಕಾಂತ್ ಅವರ ಪತ್ನಿ ಸಹ ಒಬ್ಬ ನಿರ್ಮಾಪಕಿ ಆಗಿದ್ದಾರೆ. ಆ ನಷ್ಟವನ್ನು ಭರ್ತಿ ಮಾಡಲು ರಜನಿ ತುಬಾ ತುರ್ತಾಗಿ ಲಿಂಗ ಚಿತ್ರ ಆರಂಭಿಸಿದ್ದಾರೆ ಎನ್ನುವ ಟಾಕು ಈಗ ಕಾಲಿವುಡ್ ನಲ್ಲಿ ಜಾಸ್ತಿ ಕೇಳಿ ಬರ್ತಾ ಇದೆ.
 
ಮುಖ್ಯವಾಗಿ ನೂರು ಕೋಟಿ ಲಾಭ ತರುವ ರಜನಿ ಚಿತ್ರಕ್ಕೆಂದು ಅವರಿಗೆ ನಲವತ್ತು ಕೋಟಿ ಸಂಭಾವನೆ ನೀಡಲು ನಿರ್ಮಾಪಕರು ಹಿಂದುಮುಂದೆ ನೋಡಿಲ್ಲ. ಅಲ್ಲದೆ ಲಿಂಗ ಸಿನಿಮಾ ದಲ್ಲಿ ರಜನಿ ಗೆಟಪ್ ಸಹ ಅವರ ಕ್ರೇಜ್ ನಿಸ್ಸಂಶಯವಾಗಿ ಹೆಚ್ಚಿಸುತ್ತದೆ ಎನ್ನುವುದು ಸಹ ಈಗ ಕೇಳಿ ಬರುತ್ತಿರುವ ಸುದ್ದಿ ಆಗಿದೆ. ಈ ಚಿತ್ರದಲ್ಲಿನ ಫೋಟೋಗಳನ್ನು ನೋಡಿದರೆ ಹಳೆಯ ರಜನಿಯನ್ನು ಕಂಡಂತೆ ಆಗುತ್ತಿದೆ ಎನ್ನುವ ಅಭಿಮಾನದ ಮಾತುಗಳು ಅವರ ಅಭಿಮಾನಿಗಳಿಂದ ಕೇಳಿ ಬರುತ್ತಿವೆ. 

ವೆಬ್ದುನಿಯಾವನ್ನು ಓದಿ