ಮೈಸೂರು ಬ್ಲಾಸ್ಟ್‌: 'ರನ್ ಆಂಟೋನಿ' ಚಿತ್ರದ ಕನೆಕ್ಷನ್?

ಮಂಗಳವಾರ, 2 ಆಗಸ್ಟ್ 2016 (13:34 IST)
ಬಹುನಿರೀಕ್ಷಿತ ಕನ್ನಡ ಚಿತ್ರ ರನ್ ಆಂಟೋನಿ ಚಿತ್ರವು ಈ ಮೊದಲ ಅಂಜುಕೊಂಡತೆ ರಿಲೀಸ್ ಆಗಬೇಕಿತ್ತು. ಆದ್ರೆ ಪೋಸ್ಟ್ ಪ್ರೋಡೆಕ್ಷನ್ ಹಂತ ಇನ್ನೂ ಮುಗಿದಿಲ್ಲ ಕಾರಣ ಚಿತ್ರವನ್ನು ಮುಂದೂಡಲಾಗಿದ್ದು ನಿಮಗೆಲ್ಲಾ ಗೊತ್ತು. ಆದ್ರೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೋರ್ಟ್ ಸಂಕೀರ್ಣದ ಶೌಚಾಲಯದಲ್ಲಿ ನಿಗೂಢ ವಸ್ತುವೊಂದು ಸ್ಫೋಟ ಗೊಂಡಿತ್ತು.

ಈ ಘಟನೆಯನ್ನು ನೆನಪಿಸಿಕೊಂಡಿರು 'ರನ್ ಆಂಟೋನಿ'ಚಿತ್ರಕ್ಕೂ ಹಾಗೂ ಬಾಂಬ್ ಸ್ಫೋಟ್ ಘಟನೆಗೂ ವಿಚಿತ್ರವಾದ ಕನೆಕ್ಷನ್ ಬಗ್ಗೆ ನಿರ್ದೇಶಕ ರಘು ಶಾಸ್ತ್ರಿ ಘಟನೆ ಕುರಿತಂತೆ ಮಾತನಾಡಿದ್ದಾರೆ.
 
ವಿನಯ್ ರಾಜಕುಮಾರ್ ಅಭಿನಯದ ರನ್ ಆಂಟೋನಿ ಚಿತ್ರದ ನಿರ್ದೇಶಕ ರಘು ಶಾಸ್ತ್ರಿ ಸಾಮಾಜಿಕ ಜಾಲತಾಣಗಳಲ್ಲಿ ಪೇಜ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ. 
 
ರಘು ಹೇಳುವಂತೆ.. ಪ್ರತಿನಿತ್ಯ ಮೈಸೂರು ಕೋರ್ಟ್ ಆವರಣದಲ್ಲಿ ರನ್ ಆಂಟೋನಿ ಚಿತ್ರ ಬರೆಯುತ್ತಾ ಹೋಗುತ್ತಿದ್ದರಂತೆ. ಚಿತ್ರದ ಕೆಲ ದೃಶ್ಯಗಳನ್ನು ಕೋರ್ಟ್ ಪಕ್ಕದಲ್ಲಿರುವ ಚಾಮರಾಜಪುರಂ ರೈಲ್ವೇ ಸ್ಟೇಷನ್‌ನಲ್ಲಿ ಶೂಟ್ ಮಾಡಲಾಗಿದೆಯಂತೆ!
 
ಫೇಸ್‌ಬುಕ್‌ನಲ್ಲಿ ಅವರು ಪೋಸ್ಟ್ ಮಾಡಿದ್ದು ಹೀಗಿದೆ... ಮೈಸೂರಿನ ಚಾಮರಾಜನಗರ ರೇಲ್ವೇ ಸ್ಟೇಷನ್‌ ಒಳಗಿರುವ ಕೋರ್ಟ್ ಸಂಕೀರ್ಣದ ಶೌಚಾಲಯದಲ್ಲಿ ನಿಗೂಢ ವಸ್ತುವೊಂದು ಸ್ಫೋಟ ಗೊಂಡಿತ್ತು.. ಆವರಣದಲ್ಲಿ ನಾನು ಪ್ರತಿನಿತ್ಯ ಸಂಚಾರ ಮಾಡುತ್ತಿದ್ದೆ ಎಂದು ತಿಳಿಸಿದ್ದಾರೆ. 

ರನ್ ಆಂಟೋನಿ ಸಿನಿಮಾವನ್ನು  ರಘು ಶಾಸ್ತ್ರಿ ಅವರು ನಿರ್ದೇಶನ ಮಾಡಿದ್ದಾರೆ. ವಜ್ರೇಶ್ವರಿ ಕಂಬೈನ್ಸ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣವಾಗುತ್ತಿದೆ.ಸಿನಿಮಾದಲ್ಲಿ ವಿನಯ್ ರಾಜ್ ಕುಮಾರ್ ಅವರಿಗೆ ನಾಯಕಿಯರಾಗಿ ರುಕ್ಶರ್ ಮಿರ್ ಹಾಗೂ ಸುಶ್ಮಿತಾ ಜೋಷಿ ಅವರು ಕಾಣಿಸಿಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 
 

ವೆಬ್ದುನಿಯಾವನ್ನು ಓದಿ