ನಾಗರಹಾವು ಚಿತ್ರದ ಸ್ಪೆಷಲ್ ಹಾಡಿನಲ್ಲಿ ದರ್ಶನ

ಬುಧವಾರ, 31 ಆಗಸ್ಟ್ 2016 (15:02 IST)
1970ರಲ್ಲಿ ತೆರೆ ಕಂಡ ವಿಷ್ಣುವರ್ಧನ್ ಅಭಿನಯದ ನಾಗರಹಾವು ಸಿನಿಮಾವನ್ನು ಯಾವೊಬ್ಬ ಚಿತ್ರರಸಿಕನೂ ಕೂಡ ಮರೆಯೋದಕ್ಕೆ ಸಾಧ್ಯಾನೇ ಇಲ್ಲ. ವಿಷ್ಣುವರ್ಧನ್ ಅವರಿಗೆ ಅವರದ್ದೇ ಆದ ಇಮೇಜ್ ತಂದುಕೊಟ್ಟ ಸಿನಿಮಾವಿದು.ಈ ಸಿನಿಮಾವನ್ನು ಕೋಡಿ ರಾಮಕೃಷ್ಣ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದೀಗ ಚಿತ್ರದಲ್ಲಿ ನಟ ದರ್ಶನ ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 
ಕೋಡಿ ರಾಮಕೃಷ್ಣ ತಮ್ಮ ನಿರ್ದೇಶನದಲ್ಲಿ ನಾಲ್ಕು ವರ್ಷಗಳ ಹಿಂದೆ ನಾಗರಹಾವು ಸಿನಿಮಾ ಆರಂಭಿಸಿದ್ದರು. ಇದರಲ್ಲಿ ಮೋಹಕತಾರೆ ರಮ್ಯ-ದೂದ್‌ಪೇಡಾ ದಿಗಂತ್ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಇನ್ನೂ ಚಿತ್ರದ ಸ್ಪೆಷಲ್ ಹಾಡಿನಲ್ಲಿ ನಟ ದರ್ಶನ ಕಾಣಿಸಿಕೊಳ್ಳಲಿದ್ದಾರೆ. 
 
ಕೋಡಿ ರಾಮಕೃಷ್ಣ ನಿರ್ದೇಶನದ ನಾಗರಹಾವು ಚಿತ್ರದ 3 ಡಿ ಪೋಸ್ಟರ್ ಮೈಸೂರು ರಸ್ತೆಯ ಗೋಪಾಲನ್ ಆರ್ಕೇಡ್‌ನಲ್ಲಿ ಬಿಡುಗಡೆಮಾಡಲಾಗಿತ್ತು. ಈ ಹಿಂದೆಯೇ ರಮ್ಯಾ ಅವರು ನಾನು ಒಪ್ಪಿಕೊಂಡಿರುವಂತಹ ಸಿನಿಮಾಗಳನ್ನು ಮುಗಿಸಿಕೊಡುತ್ತೇನೆ ಅಂತ ಹೇಳಿದ್ದರು.ಹಾಗಾಗಿ ರಮ್ಯಾ ಅಭಿಮಾನಿಗಳು ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತಾ ಕಾಯುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ