ನರ್ಗಿಸ್ ಫಕ್ರಿಗೆ ಅದ್ಯಾವುದೇ ಕ್ರಿಕೆಟಿಗರು ಹಾಟ್ ಅನ್ನಿಸಲ್ವಂತೆ..

ಸೋಮವಾರ, 2 ಮೇ 2016 (12:49 IST)
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನರ್ಗಿಸ್ ಫಕ್ರಿ, ನನಗೆ ಯಾವುದೇ ಕ್ರಿಕೆಟಿಗರೂ ಹಾಟ್ ಅನ್ನಿಸುವುದಿಲ್ಲ ಎಂದು ಹೇಳಿದ್ದಾಳೆ ನರ್ಗಿಸ್ ಫಕ್ರಿ. ನರ್ಗಿಸ್ ಫಿಕ್ರಿ ಅಂದ್ರೆ ಯಾರು ಅಂತ ನಿಮಗೆ ಹೇಳಬೇಕಿಲ್ಲ.. ಯಾಕಂದ್ರೆ ನರ್ಗಿಸ್ ಫಕ್ರಿ ಅಜರ್ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಜತೆಗೆ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ನರ್ಗಿಸ್ ಇಮ್ರಾನ್ ಹಶ್ಮಿ ಜತೆಗೆ ದೀರ್ಘಾವಧಿಯ ಕಿಸ್ಸಿಂಗ್ ಸೀನ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  


 




ಖಾಸಿಗಿ ಪತ್ರಿಗೆಗೆ ನೀಡಲಾದ ಸಂದರ್ಶನದಲ್ಲಿ ನರ್ಗಿಸ್ ಈ ಬಗ್ಗೆ ಹೇಳಿಕೊಂಡಿದ್ದಾಳೆ. ಅದಲ್ಲದೇ ನರ್ಗಿಸ್ ಅವರಿಗೆ ತಮ್ಮ ಬ್ಯೂಸಿ ಲೈಫ್‌ನಲ್ಲಿ ಅಷ್ಟಾಗಿ ಕ್ರಿಕೆಟಿಗರನ್ನು ನೋಡಲು ಸಾಧ್ಯವಾಗುದಿಲ್ವಂತೆ. ಯಾಕಂದ್ರೆ ಅವರ ಮುಂಬರುವ ಚಿತ್ರ ಅಜರ್‌ ಶೂಟಿಂಗ್‌ನಲ್ಲಿ ಬ್ಯೂಸಿಯಾಗಿದ್ದಾರೆ ನರ್ಗಿಸ್,
 
ಮಾಜಿ ಕ್ರಿಕೆಟಿಗ ಅಜರುದ್ದೀನ್ ಜೀವನಾಧಾರಿತ ಚಿತ್ರದಲ್ಲಿ ಇಮ್ರಾನ್ ಹಶ್ಮಿ ಹಾಗೂ ನರ್ಗಿಸ್ ಫಕ್ರಿ ಕಾಂಬಿನೇಷನ್ ಎಲ್ಲರನ್ನು ರಂಜಿಸಲಿದೆ.

ಅಜರುದ್ದೀನ್ 90ರ ದಶಕದಲ್ಲಿ ಭಾರತೀಯ ಕ್ರಿಕೆಟ್ ತಂಡದ ಪ್ರತಿನಿಧಿಸಿದ್ದರು 2000ರಲ್ಲಿ ಅವರು  ಮ್ಯಾಚ್ ಫಿಕ್ಸಿಂಗ್ ಸುಳಿಗೆ ಸಿಕ್ಕು ಭಾರತೀಯ ಕಣ್ಣಲ್ಲಿ ಸಣ್ಣವರಾದರು. ಅವರಿಗೆ ಆಜೀವ ಪರ್ಯಂತ ಕ್ರಿಕೆಟ್ ನಲ್ಲಿ ಭಾಗವಹಿಸದಂತೆ ನಿಷೇಧ ಹೇರಲಾಯಿತು. ಆ ಬಳಿಕ ರಾಜಕೀಯದಲ್ಲಿ ತಮಗೊಂದು ಸ್ಥಾನ ಕಾಂಗ್ರೆಸ್ ಪಕ್ಷದ ಮೂಲಕ ಗಳಿಸಿಕೊಂಡ ಅಜರ್ ಅವರ ಜೀವನ ಚರಿತ್ರೆಯ ಸಿನಿಮಾದಲ್ಲಿ ಇಮ್ರಾನ್ ನಟಿಸುತ್ತಿದ್ದಾರೆ.
 
ಈ ಚಿತ್ರದಲ್ಲಿ ಸಂಗೀತ ಬಿಜಲಾನಿ ಪಾತ್ರದಲ್ಲಿ ನರ್ಗೀಸ್ ಫಕ್ರಿ, ಅವರ ಮೊದಲ ಪತ್ನಿ ನೌರೆನ್ ಪಾತ್ರದಲ್ಲಿ ಪ್ರಾಚಿ ದೇಸಾಯಿ ನಟಿಸುತ್ತಿದ್ದಾರೆ. ಇದನ್ನು ಟೋನಿ ಡಿಸೋಜ ಅವರು ನಿರ್ದೇಶನ ಮಾಡುತ್ತಿದ್ದಾರೆ. ಇದನ್ನು  ಬಾಲಾಜಿ ಮೋಶನ್ ಪಿಕ್ಚರ್ಸ್ ಹಾಗೂ ಎಂಎಸ್ ಎಂ ಮೋಶನ್ ಪಿಕ್ಚರ್ಸ್ ನಿರ್ಮಾಣ ಮಾಡುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ