ಇವತ್ತು ಬಂದ್ ನಡುವೆಯೂ 'ನೀರ್ ದೋಸೆ' ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂದು 'ನೀರ್ ದೋಸೆ' ಚಿತ್ರ ರಿಲೀಸ್ ಆಗಿದೆ. ಈ ಹಿನ್ನೆಲೆಯಲ್ಲಿ ಚಿತ್ರಮಂದಿರಕ್ಕೆ ಬಂದು ನಟ ಜಗ್ಗೇಶ್ ಹಾಗೂ ಹರಿಪ್ರಿಯಾ ಸಿನಿಮಾ ವೀಕ್ಷಿಸಿದ್ರು..
ಇವತ್ತು ಬಂದ್ ಇರುವುದರಿಂದ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದೆ. ಆದ್ರೆ ನೀರ್ ದೋಸೆ ಚಿತ್ರ ಪ್ರದರ್ಶನಕ್ಕೆ ಬಂದ್ ಬಿಸಿ ತಟ್ಟಲಿಲ್ಲ. ಮೇನಕ ಚಿತ್ರ ಮಂದಿರಕ್ಕೆ ಬಂದ ಚಿತ್ರ ನಟ ಜಗ್ಗೇಶ್ ಹಾಗೂ ಹರಿಪ್ರಿಯಾ ಚಿತ್ರ ವೀಕ್ಷಣೆ ಮಾಡಿದ್ದರು. ಈ ವೇಳೆ ನಟ ಜಗ್ಗೇಶಗೆ ನಟಿ ಹರಿಪ್ರಿಯಾ ಸಾಥ್ ನೀಡಿದ್ದರು.
ಈ ವೇಳೆ ಮೇನಕ ಚಿತ್ರಮಂದಿರದಲ್ಲಿ ಜನ ಸೇರಿದ್ದು, ಬಂದ್ ನಡುವೆಯೂ ಚಿತ್ರ ಮಂದಿರಕ್ಕೆ ಬಂದ ಪ್ರೇಕ್ಷಕರು ಖುಷಿಯಿಂದ ಚಿತ್ರ ವೀಕ್ಷಿಸಿದ್ದು ಕಂಡು ಬಂತು.
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ