ಮಗಳಿಗೆ ಅರೆಬಿಕ್ ಹೆಸರಿಟ್ಟ ದೀಪಿಕಾ ಪಡುಕೋಣೆ: ನೀವೆಂಥಾ ಹಿಂದೂ ಎಂದು ಪ್ರಶ್ನಿಸಿದ ನೆಟ್ಟಿಗರು

Krishnaveni K

ಶನಿವಾರ, 2 ನವೆಂಬರ್ 2024 (12:54 IST)
Photo Credit: Instagram
ಮುಂಬೈ: ಬಾಲಿವುಡ್ ದಂಪತಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ದೀಪಾವಳಿ ಹಬ್ಬದ ಸಂದರ್ಭದಲ್ಲಿ ತಮ್ಮ ಮಗಳ ಹೆಸರು ರಿವೀಲ್ ಮಾಡಿದ್ದಾರೆ. ಆದರೆ ಅರೆಬಿಕ್ ಭಾಷೆಯ ಹೆಸರು ನೋಡಿ ಕೆಲವರು ನೀವೆಂಥಾ ಹಿಂದೂ ಎಂದು ತಕರಾರು ತೆಗೆದಿದ್ದಾರೆ.

ದೀಪಿಕಾ ಮತ್ತು ರಣವೀರ್ ತಮ್ಮ ಮಗಳಿಗೆ ‘ದುವಾ’ ಎಂದು ಹೆಸರಿಟ್ಟಿರುವುದಾಗಿ ಪ್ರಕಟಿಸಿದ್ದಾರೆ. ದುವಾ ಎಂಬುದು ಅರೆಬಿಕ್ ಭಾಷೆಯಾಗಿದ್ದು, ಮುಸ್ಲಿಮರು ಪ್ರಾರ್ಥನೆ ಎನ್ನುವುದಕ್ಕೆ ದುವಾ ಎನ್ನುತ್ತಾರೆ. ಹೆಸರಿನ ಜೊತೆಗೆ ಅದರ ಅರ್ಥವನ್ನೂ ದೀಪಿಕಾ ಮತ್ತು ರಣವೀರ್ ಪ್ರಕಟಿಸಿದ್ದಾರೆ.

ದುವಾ ಎಂದರೆ ಪ್ರಾರ್ಥನೆ ಎಂದರ್ಥ. ಇವಳು ನಮ್ಮ ಪ್ರಾರ್ಥನೆಗೆ ಸಿಕ್ಕ  ವರ. ಹೀಗಾಗಿ ಅವಳಿಗೆ ಈ ಹೆಸರಿಟ್ಟಿದ್ದೇವೆ ಎಂದು ವಿವರಣೆ ನೀಡಿದ್ದಾರೆ. ಆದರೆ ಇದಕ್ಕೆ ಕಾಮೆಂಟ್ ಮಾಡಿರುವ ಕೆಲವರು ನಿಮಗೆ ಬೇರೆ ಹೆಸರು ಸಿಕ್ಕಲಿಲ್ಲವೇ? ಇದ್ಯಾಕೆ ಅರೆಬಿಕ್ ಭಾಷೆಯ ಮುಸ್ಲಿಮರು ಬಳಸುವ ಹೆಸರಿಟ್ಟಿದ್ದೀರಿ? ನೀವು ನಿಜವಾಗಿಯೂ ಹಿಂದೂಗಳಾ ಎಂದು ಪ್ರಶ್ನೆ ಮಾಡಿದ್ದಾರೆ.

ಮತ್ತೆ ಕೆಲವರು ಅದರಲ್ಲಿ ತಪ್ಪೇನಿದೆ? ದೇವರು ಎಲ್ಲರೂ ಒಬ್ಬನೇ. ದುವಾ ಅಂತ ಮುಸ್ಲಿಮರು ಹೇಳುತ್ತಾರೆ, ಪ್ರಾರ್ಥನೆ ಅಂತ ಹಿಂದೂಗಳು ಹೇಳುತ್ತಾರೆ ಅಷ್ಟೇ. ತುಂಬಾ ಚೆನ್ನಾಗಿದೆ ಹೆಸರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಮ್ಮ ಮಗಳ ಕಾಲಿನ ಫೋಟೋವನ್ನು ಮಾತ್ರ ದೀಪಿಕಾ ದಂಪತಿ ಪ್ರಕಟಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ