ಬಿಕಿನಿಯಲ್ಲಿ ಬಿಂಕದ ಸಿಂಗಾರಿ ನಿಕೇಶಾ ಪಟೇಲ್

ಬುಧವಾರ, 22 ಫೆಬ್ರವರಿ 2017 (11:58 IST)
ರೂಪದರ್ಶಿ ಮತ್ತು ನಟಿ ನಿಕೇಶಾ ಪಟೇಲ್ ಕನ್ನಡದ ನರಸಿಂಹ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಅಡಿಯಿಟ್ಟವರು. ಆ ಬಳಿಕ ವರದನಾಯಕ, ಡಕೋಟಾ ಪಿಕ್ಚರ್, ನಮಸ್ತೆ ಮೇಡಂ, ಅಲೋನ್ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಬೋಲ್ಡ್ ಫೋಟೋಗಳನ್ನು ಹಂಚಿಕೊಳ್ಳುವುದರಲ್ಲಿ ನಿಕೇಶಾ ಜನಪ್ರಿಯಳು.
 
ಇದೀಗ ಈಜುಡುಗೆಯಲ್ಲಿನ ಫೋಟೋವನ್ನು ಎಲ್ಲರೊಂದಿಗೂ ಹಂಚಿಕೊಂಡಿದ್ದಾರೆ ನಿಕೇಶಾ. ಮಂಗಳವಾರ ನೀರಿಗಿಳಿಯಲು, ಈಜಲು ಒಳ್ಳೆಯ ದಿನ ಎಂದು ಫೋಟೋವನ್ನು ಎಲ್ಲರೊಂದಿಗೂ ಷೇರ್ ಮಾಡಿಕೊಂಡಿದ್ದಾರೆ. 
 
ಸದ್ಯಕ್ಕೆ ನಿಕೇಶಾ ಕೈಯಲ್ಲಿ ಆಫರ್‌ಗಳಿಲ್ಲ. ತೆಲುಗಿನ ಒಂದೋ ಎರಡೋ ಚಿತ್ರಗಳು ಮಾತ್ರ ಕೈಯಲ್ಲಿವೆ. ಹಾಗಾಗಿ ಈಗ ಈಜುಡುಗೆಯಲ್ಲಿ ಒಂದಷ್ಟು ಕಣ್ಣೀಗೆ ಬೀಳುವ ಪ್ರಯತ್ನ ಮಾಡಿದ್ದಾರೆ. ಆ ಮೂಲಕವಾದರೂ ಅವರಿಗೆ ಚಾನ್ಸ್ ಸಿಗುತ್ತದಾ ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ