ಪೂಜಾ, ಕಿಶನ್ ಮದುವೆ ಬೆನ್ನಲ್ಲೇ ಆದಿ, ಭಾಗ್ಯಗೇ ಮದುವೆ ಮಾಡುವಂತೆ ಡೈರೆಕ್ಟರ್‌ಗೆ ಫ್ಯಾನ್ಸ್ ಬೇಡಿಕೆ

Sampriya

ಶುಕ್ರವಾರ, 25 ಜುಲೈ 2025 (18:18 IST)
Photo Credit X
ಬೆಂಗಳೂರು: ಎಲ್ಲ ಅಡೆತಡೆಗಳನ್ನು ಮೀರಿ ಕೊನೆಗೂ ಪೂಜಾ ಹಾಗೂ ಕಿಶನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಕಳೆದ ವಾರದಿಂದ ಹಲವು ತಿರುವುಗಳೊಂದಿಗೆ ಪ್ರಸಾರವಾದ ಪೂಜಾ ಕಿಶನ್ ಮದುವೆಗೆ ಕೊನೆಗೆ ಭಾಗ್ಯನೇ ಅಡ್ಡಗಾಲು ಹಾಕಿದ್ದಳು.  

ಆದರೆ ಕಿಶನ್‌ನ ಅಣ್ಣ ಆದಿ ತನ್ನೆಲ್ಲ ತಪ್ಪಿಗೆ ಭಾಗ್ಯ ಬಳಿ ಕ್ಷಮೆಯಾಚಿಸಿ, ಭಾಗ್ಯಳ ದೊಡ್ಡತನವನ್ನು ಮನೆಯವರ ಮುಂದೆ ಎತ್ತಿ ಹಿಡಿದು, ಮದುವೆಯನ್ನು ಮಾಡಿಕೊಡುವಂತೆ ಕಣ್ಣೀರು ಹಾಕಿದ್ದ. ಕೊನೆಗೂ ಕಿಶನ್ ಹಾಗೂ ಪೂಜಾ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಇಂದು ಕಲರ್ಸ್ ಕನ್ನಡ ಬಿಡುಗಡೆ ಮಾಡಿದ ಪ್ರೋಮೋದಲ್ಲಿ ಸಂಕಷ್ಟದಲ್ಲಿದ್ದ ಭಾಗ್ಯಳಿಗೆ ಸಹಾಯ ಮಾಡುವ ಮೂಲಕ ಆದಿ ನೆರವಾಗಿದ್ದಾನೆ. ಈ ಪ್ರೋಮೋವನ್ನು ನೋಡಿ, ಭಾಗ್ಯಲಕ್ಷ್ಮಿ ಅಭಿಮಾನಿಗಳು ಆದಿ ಹಾಗೂ ಭಾಗ್ಯ ಮದುವೆಯಾಗಲಿ ಎಂದು ತಮ್ಮ ಕೋರಿಕೆಯನ್ನು ಮುಂದಿಟ್ಟಿದ್ದಾರೆ. 

ಅದಲ್ಲದೆ ಈ ಜೋಡಿ ಆದಷ್ಟು ಬೇಗ ಮದುವೆಯಾಗುವಂತಾಗಲಿ ಎಂದು ಟ್ರೋಲ್ ಮಾಡಲಾಗುತ್ತಿದೆ. ೊಟ್ಟಾರೆ ಭಾಗ್ಯ ಹಾಗೂ ಆದಿ ದಾಂಪತ್ಯ ಜೀವನಕ್ಕೆ ಕಾಲಿಡಬೇಕೆನ್ನುವುದು ಅಭಿಮಾನಿಗಳ ಬೇಡಿಕೆಯಾಗಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ