ಸ್ಯಾಂಡಲ್‌ವುಡ್‌ನ ಒಂದಷ್ಟು ಚಿತ್ರಗಳಲ್ಲಿ ಅಭಿನಯಿಸಿರುವ ನಿಕೇಶಾ ಪಟೇಲ್ ಈಗ ಕಲರ್‌ಫುಲ್ ಬೆಡಗಿ. ಆಗಾಗ ಈಜುಡುಗೆ, ಬಿಕಿನಿ, ಟೂಪೀಸ್ ಅದೂ ಇದೂ ಎಂದು ಸುದ್ದಿ ಮಾಡುತ್ತಿರುತ್ತಾರೆ. ಈ ಸಲ ಅವರು ಕಪ್ಪು ಬಿಕಿನಿಯಲ್ಲಿ ಮಿಂಚಿದ್ದಾರೆ.
’ನರಸಿಂಹ’ ಚಿತ್ರದ ಮೂಲಕ ಕನ್ನಡಕ್ಕೆ ಅಡಿಯಿಟ್ಟ ನಿಕೇಶಾ, ಬಳಿಕ ಡಕೋಟಾ ಪಿಕ್ಚರ್, ವರದನಾಯಕ, ನಮಸ್ತೇ ಮೇಡಂ, ಅಲೋನ್ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಸ್ಯಾಂಡಲ್‍ವುಡ್ ಚಿತ್ರರಂಗ ಕೈಹಿಡಿಯಲಿಲ್ಲ. ಹಾಗಾಗಿ ಪಕ್ಕದ ಆಂಧ್ರದಲ್ಲಿಈಗ ಅದೃಷ್ಟ ಪರೀಕ್ಷಿಸುತ್ತಿದ್ದಾರೆ.