ಸನ್ನಿಲಿಯೋನ್ ಬೆನ್ನುಬಿದ್ದ ಪೊಲೀಸರು..!

ಬುಧವಾರ, 8 ಫೆಬ್ರವರಿ 2017 (09:07 IST)
ನೋಯ್ಡಾದಲ್ಲಿ ನಡೆದಿದ್ದ 3700 ಕೋಟಿ ರೂಪಾಯಿ ಆನ್`ಲೈನ್ ವಂಚನೆ ಪ್ರಕರಣದ ಸುಳಿಯಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಮತ್ತು ಅಮಿಶಾ ಪಟೇಲ್ ಸಿಲುಕಿದ್ದಾರೆ.

2016ರಲ್ಲಿ ಹಗರಣದ ರೂವಾರಿ ಅನುಭವ್ ಮಿತ್ತಲ್ ಅವರ ಇಂಟ್ ಮಾರ್ಟ್ ಜಾಲತಾಣವನ್ನ ಸನ್ನಿ ಅನಾವರಣಗೊಳಿಸಿದ್ದರು. ಅಮಿಶಾ ಪಟೇಲ್ ಸಹ ಪಾಲ್ಗೊಂಡಿದ್ದರು. ನಕಲಿ ಯೋಜನೆಗೆ ಹೂಡಿಕೆದಾರರನ್ನ ಸೆಳೆಯಲು ಈ ಇಬ್ಬರೂ ನಟಿಯರನ್ನ ಮಿತ್ತಲ್ ಬಳಸಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಒಳಪಡಿಸುವುದಾಗಿ ಹಿರಿಯ ಧಿಕಾರಿಯೊಬ್ಬರು ತಿಳಿಸಿರುವುದಾಗಿ ವರದಿಯಾಗಿದೆ.

ವೆಬ್ದುನಿಯಾವನ್ನು ಓದಿ