ಬಾಲಿವುಡ್ ನಿಖರವಾದ ಉತ್ತರವಿಲ್ಲದ ಪ್ರಶ್ನೆ ಅಂದ್ರೆ ನಟ ಸಲ್ಮಾನ್ ಖಾನ್ ಅವರು ಯಾವಾಗ ವಿವಾಹವಾಗುತ್ತಾರೆ ಅನ್ನೋದು. ಸಲ್ಲು ಯಾವವಾಗ ವಿವಾಹವಾಗುತ್ತಾರೆ ಅನ್ನೋ ಬಗ್ಗೆ ಅನೇಕ ಮಾತುಗಳು ಆಗಾಗ್ಗೆ ಕೇಳಿ ಬರುತ್ತಲೇ ಇರುತ್ತದೆ. ದ್ರೆ ಸಲ್ಮಾನ್ ಖಾನ್ ಅವರು ಮಾತ್ರ ಇದುವೆರೆಗೂ ಮದುವೆಯ ಬಗ್ಗೆ ಸರಿಯಾದ ಮಾಹಿತಿ ಹೊರ ಹಾಕಿಲ್ಲ. ಆದ್ರೀಗ ಸಲ್ಲುಭಾಯಿ ದಿನಾಂಕವೊಂದನ್ನು ಬಹಿರಂಗಗೊಳಿಸಿದ್ದಾರೆ.
ಸಾನಿಯಾ ಮಿರ್ಜಾ ಅವರ ಎಸ್ ಅಗೈನಿಸ್ಟ್ ಒಡ್ಸ್ ಪುಸ್ತ ಬಿಡುಗಡೆ ಕಾರ್ಯಕ್ರಮದಲ್ಲಿ ಸಲ್ಲು ನಿನ್ನೆ ಭಾಗವಹಿಸಿದ್ರು. ಕಾರ್ಯಕ್ರಮದಲ್ಲಿ ಸಾನಿಯಾ ಮಿರ್ಜಾ ಅವರು ಸಲ್ಲು ಭಾಯಿಗೆ ಪ್ರಶ್ನೆಯೊಂದನ್ನು ಕೇಳಿದ್ದರು. ಎಲ್ಲರೂ ಸದ್ಯ ಇದೇ ಪ್ರಶ್ನೆಯನ್ನೇ ಕೇಳುತ್ತಿದ್ದಾರೆ. ನಾನು ಅದನ್ನೇ ಕೇಳುತ್ತೇನೆ. ಸಲ್ಮಾನ್ ಜೀ ನೀವು ಯಾವಾಗ ವಿವಾಹವಾಗುತ್ತೀರಿ ಅಂದ್ರು. ಇದಕ್ಕೆ ಉತ್ತರಿಸಿದ ಸಲ್ಮಾನ್ ಖಾನ್ ನವೆಂಬರ್ 18 ಅಂದ್ರು.