ಇಟಲಿಯಲ್ಲಿ ವೇಕೆಷನ್ ಎಂಜಾಯ್ ಮಾಡುತ್ತಿರುವ ಸನ್ನಿ ಲಿಯೋನ್

ಗುರುವಾರ, 2 ಜೂನ್ 2016 (19:05 IST)
ಬಾಲಿವುಡ್ ನಟಿ ಸನ್ನಿ ಲಿಯೋನ್ ವೇಕೆಷನ್ ಎಂಜಾಯ್ ಮಾಡುತ್ತಿರುವ ನಟಿಯರ ಪಟ್ಟಿಯಲ್ಲಿ ಸೇರ್ಪಡೆಗೊಂಡಿದ್ದಾಳೆ. ಬಾಲಿವುಡ್‌ನ ಹಲವು ಮಂದಿ ಸಮ್ಮರ್ ವೇಕೆಷನ್ ತೆರಳಿ ಅಲ್ಲಿ ತಮ್ಮ ಪ್ಯಾಮಿಲಿ ಜತೆಗೆ ತೆರಳಿ ಕ್ಯಾಮರಾಗೆ ಪೋಸ್ ನೀಡಿದ್ದರು, ಇದೀಗ ಸನ್ನಿ ಲಿಯೋನ್ ಇಟಲಿಯಲ್ಲಿ ಪತಿ ಡೇನಿಯಲ್ ಜತೆ ಕಾಣಿಸಿಕೊಂಡಿದ್ದಾಳೆ.





ಒನ್ ನೈಟ್ ಸ್ಟ್ಯಾಂಡ್ ಖ್ಯಾತಿಯ ಸನ್ನಿ ಲಿಯೋನ್ ಇಟಲಿಯಲ್ಲಿ ತನ್ನ ಪತಿ ಯೇನಿಯಲ್ ಜತೆಗೆ ಹಾಲಿಡೇ ಎಂಜಾಯ್ ಮಾಡುತ್ತಿದ್ದಾಳೆ. ಈ ಬಗ್ಗೆ ಸನ್ನಿ ಫೊಟೋ ಶೇರ್ ಮಾಡಿದ್ದಾಳೆ.

ಪರಿಣಿತಿ ಚೋಪ್ರಾ, ಸೋನಾಕ್ಷಿ ಸಿನ್ಹಾ, ಶ್ರೀದೇವಿ, ಕರೀನಾ ಕಪೂರ್ ವೇಕೆಷನ್ ಎಂಜಾಯ್ ಮಾಡಿ ವಾಪಸ್ಸಾಗಿದ್ದರು. 

ಹ್ಯಾಪಿ ಆಂಡ್ ಸಕ್ಸಸ್‌ಫುಲ್ ಮ್ಯಾರೇಜ್ ಲೈಫ್‌ ಬಗ್ಗೆ ಗುಟ್ಟನ್ನು ಬಿಚ್ಚಿಟ್ಟಿದ್ದಾಳು ಸನ್ನಿ, ಯಶಸ್ವಿ ಮದುವೆಗೆ ಸಂತೋಷ ಹಾಗೂ ಸಂಧಾನ ಕಾರಣವಾಗಿದೆ ಎಂದು ಸನ್ನಿ ಹೇಳಿದ್ದಾಳು. ಸನ್ನಿ ಲಿಯೋನ್ ಡೇನಿಯಲ್ ಅವರನ್ನು 2009ರಲ್ಲಿ ಮದುವೆಯಾಗಿದ್ದಾರೆ. ಇದುವರೆಗೂ ಅವರಿಬ್ಬರು ತಮ್ಮ ಮ್ಯಾರೇಜ್ ಲೈಫ್‌ನಿಂದ ಸಂತೋಷವಾಗಿದ್ದಾರೆ ಎಂದು ಹೇಳಿದ್ದರು.
 
2012 ಜಿಸ್ಮ್ -2 ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ನಟಿ ಸನ್ನಿ ಲಿಯೋನ್ ಬಿಗ್ ಬಾಸ್ ಮೂಲಕ ಪರಿಚಿತರಾದವರು. ಹಿಂದಿ ಚಿತ್ರರಂಗದಲ್ಲಿ ತಮ್ಮದೇ ಆದ ನೆಲೆ ಕಂಡು ಕೊಂಡಿರುವ ಸನ್ನಿ, ಬಾಲಿವುಡ್ ಇಂಡಸ್ಟ್ರಿಯಲ್ಲಿ ಕೆಲ ಜನರನ್ನು ಭೇಟಿ ಮಾಡಿದ್ದು ಅವರಿಗೆ ಖುಷಿ ತಂದಿದೆ ಎಂದು ಹೇಳಿದ್ದರು
 
ಇನ್ನೂ ಶಾರೂಖ್ ಅಭಿನಯದ ರಾಯಿಸ್ ಚಿತ್ರದಲ್ಲೂ ಸನ್ನಿ ನಟಿಸಿದ್ದಾಳೆ.. ಶಾರೂಖ್ ಜತೆಗೆ ಐಟಂ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದಾಳೆ ಸನ್ನಿ ಲಿಯೋನ್. ಇನ್ನೂ ರಾಯಿಸ್ ಚಿತ್ರ ಜುಲೈ 1ರಂದು ತೆರೆಗೆ ಬರಲಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ