ಈ ಭಯದಿಂದಲೇ ನಟನಾ ವೃತ್ತಿಯಿಂದ ದೂರವೇ ಉಳಿದಿದ್ದ ನಟಿ ಮಹಿಮಾ ಚೌಧರಿ!

ಬುಧವಾರ, 24 ಆಗಸ್ಟ್ 2016 (10:47 IST)
ಬಾಲಿವುಡ್‌ನ ಖ್ಯಾತ ತಾರೆ ಮಹಿಮಾ ಚೌಧರಿ ನಿಮಗೆ ನೆನಪಿರಬಹುದು. 'ಪರ್ದೇಸ್' ಚಿತ್ರದಲ್ಲಿ ಶಾರೂಖ್ ಖಾನ್ ಜತೆಗೆ ನಟಿಸಿ ಹಲವು ಅಭಿಮಾನಿಗಳ ಮನ ಗೆದ್ದಿದ್ದ ನಟಿ ಮಹಿಮಾ, ನಿಜಕ್ಕೂ ಅವರು ಸಮಸ್ಯೆಯಿಂದ ಬಳಲುತ್ತೀರಾ? ಹಲವು ವರ್ಷಗಳಿಂದ ಟನೆಯಿಂದ ದೂರವೇ ಉಳಿದಿದ್ದರು. ಹೀಗೆ ನಟನೆಯಿಂದ ಅವರನ್ನು ದೂರವಿಟ್ಟ ಆ ಭಯ ಯಾವುದು.. ಎಂಬುದರ ಬಗ್ಗೆ ಎಲ್ಲರೂ ಆಶ್ಚರ್ಯ ಪಡಬಹುದಾದಂತಹ ಉತ್ತರ ನೀಡಿದ್ದಾರೆ ಮಹಿಮಾ ಚೌಧರಿ. 


ಬಾಲಿವುಡ್‌ನ ಖ್ಯಾತ ತಾರೆ ಮಹಿಮಾ ಚೌಧರಿ ನಿಮಗೆ ನೆನಪಿರಬಹುದು.. ಇದೀಗ ಮಹಿಮಾ ಚೌಧರಿ ಹೊಸದಾಗಿ ವಿಷಯವೊಂದನ್ನು ಬಹಿರಂಗ ಪಡಿಸಿದ್ದಾರೆ. ಈ ಮಧ್ಯೆ ಮಹಿಮಾ ಚೌಧರಿ ಖಿನ್ನತೆಯಿಂದ ಬಳಲುತ್ತಿದ್ದರು ಎಂಬ ಸುದ್ದಿ ಗಳು ಕೇಳಿ ಬಂದಿದ್ದವು. 
 
ಶಾರೂಖ್ ಖಾನ್ ಜತೆ ನಟಿಸಿದ್ದ ನಟಿಗೆ ಕ್ಯಾಮರಾ, ಆ್ಯಕ್ಷನ್‌ಗೆ ಕೇಳಿದ್ರೆ ಮಹಿಮಾ ಚೌಧರಿಗೆ ಭಯ ಇತ್ತಂತೆ. ಇದೇ ಕಾರಣದಿಂದಲೇ ಅವರು ನಟನಾ ವೃತ್ತಿಯಿಂದ ದೂರವೇ ಉಳಿದಿದ್ದರು. ಈ ಕುರಿತು ಖುದ್ದು ಮಹಿಮಾ ಚೌಧರಿಯೇ ಆಶ್ಚರ್ಯಕರವಾದ ಗುಟ್ಟನ್ನು ಬಹಿರಂಗ ಪಡಿಸಿದ್ದಾರೆ. 
 
ಸುಭಾಷ್ ಘಾಯ್ ಅವರ ಚಿತ್ರ ಶಾರೂಖ್ ಖಾನ್ ಜತೆಗೆ ನಟಿಸಿದ್ದ 'ಪರ್ದೇಸ್' ಚಿತ್ರದಲ್ಲಿ ದೊಡ್ಡ ಪರದೆಯಿಂದ ಹಿಂತುರುಗಿದ್ರಂತೆ. ಶೀನಾ ಬೋರಾ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂಡಿ ಬರುತ್ತಿರುವ ಬಂಗಾಳಿ ಚಿತ್ರದಲ್ಲಿ ಮಹಿಮಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರದ ಮೂಲಕ ಅವರು ಮತ್ತೆ ಪರದೆ ಮೇಲೆ ಎಂಟ್ರಿ ನೀಡುತ್ತಿದ್ದಾರೆ..

ಹಲವು ವರ್ಷಗಳಿಂದ ಮಹಿಮಾ ಸಿನಿಮಾ ವೃತ್ತಿಯಿಂದ ದೂರ ಉಳಿದ್ದದ್ದು ಯಾಕೆ? ಎಂದು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಇದೀಗ ನನಗೆ ಆ್ಯಕ್ಟಿಂಗ್ ಮಾಡಲು ಭಯ ಆಗುತ್ತದೆ. ನಾನು ಡೈಲಾಗ್ ಹಾಗೂ ಕ್ಯಾಮರಾ ಕಂಡ್ರೆ ಹೆದರುತ್ತೇನೆ. ನನಗೆ ಅನ್ನಿಸೋ ಪ್ರಕಾರ ನನಗೆ ಲೈಟ್..ಆ್ಯಕ್ಷನ್ ಹಾಗೂ ಕ್ಯಾಮರಾ ಗಳಿಂದ ಫೋಬಿಯಾ ಇದೆ ಎನ್ನಿಸುತ್ತದೆ ಎಂದು ರಹಸ್ಯ ಬಿಚ್ಚಿಟ್ಟಿದ್ದಾರೆ ಮಹಿಮಾ. 
 
ಹೀಗೆ ಹೇಳುವುದರ ಮೂಲಕ ಎಲ್ಲರಿಗೂ ಆಶ್ಚರ್ಯ ಮೂಡಿಸಿರುವ ಮಹಿಮಾ ಚೌಧರಿ, ಅವರ ಹೇಳಿಕೆಯಿಂದ ಎಲ್ಲಾ ಜನರು ಪ್ರಶ್ನೆಗಳನ್ನು ಕೇಳುವಂತಾಗಿದೆ. ಇತ್ತೀಚೆಗೆ ಮಹಿಮಾ ನಿಜಕ್ಕೂ ಖಿನ್ನತೆಯಿಂದ ಬಳಲುತ್ತೀರಾ.. ಮದುವೆ, ಮಕ್ಕಳು ಅಂತ ವಿರಾಮದ ಬಳಿಕ ವಾಪಸ್ಸಾದ ಮಹಿಮಾ ಇಷ್ಟರ ಮಟ್ಟಿಗೆ ನರ್ವಸ್ ಆಗಲು ಈ ಭಯವೇ ಕಾರಣವಾಗಿತ್ತಾ ಎಂದು ಅಭಿಮಾನಿಗಳು ಯೋಚನೆ ಮಾಡುತ್ತಿದ್ದಾರಂತೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ