ಪಾಕಿಸ್ತಾನಿ ಸಿನಿಮಾದಲ್ಲಿ ಅಭಿನಯಿಸಿದ ಓಂ ಪುರಿ

ಬುಧವಾರ, 13 ಜನವರಿ 2016 (12:54 IST)
ತಾವು ನಟಿಸಿರುವ ಮೊದಲ ಪಾಕಿಸ್ತಾನಿ ಸಿನಿಮಾ ಆಕ್ಟರ್ ಇನ್ ಲಾದಲ್ಲಿ ಕೆಲಸ ಮಾಡಿರೋದಕ್ಕೆ  ಅತೀವ ಖುಷಿಯಾಯಿತು ಎಂದಿದ್ದಾರೆ ಖ್ಯಾತ ನಟ ಓಂಪುರಿ. ಅದೊಂದು ಅತ್ಯುತ್ತಮ ಸ್ಕ್ರಿಪ್ಟ್. ಸ್ಕ್ರಿಪ್ಚ್ ಅನ್ನ ಮೊದಲು ನೋಡಿದಾಗ ನನಗೆ ಬಹಳ ಇಷ್ಟವಾಯ್ತು. ಹೀಗಾಗಿ ಆ ಚಿತ್ರದಲ್ಲಿ ನಟಿಸದಿರೋದಕ್ಕೆ ಮನಸ್ಸು ಒಪ್ಪಲಿಲ್ಲ ಎಂದಿದ್ದಾರೆ ಓಂ.
 
 
ಇತ್ತೀಚೆಗಷ್ಟೇ ಓಂಪುರಿ ತಮ್ಮ ಭಾಗದ ಸಿನಿಮಾವನ್ನ ಮುಗಿಸಿಕೊಂಡು ಕರಾಚಿಯಿಂದ ಇಂಡಿಯಾಗೆ ವಾಪಸ್ ಬಂದಿದ್ದಾರೆ. ಇದು ಅವರ ಮೊದಲ ಮೊದಲ ಪಾಕಿಸ್ತಾನಿ ಸಿನಿಮಾ. ಈ ಸಿನಿಮಾ ಓಂಪುರಿಗೆ ಒಂದು ಹೊಸ ಎಕ್ಸ್ ಪೀರಿಯನ್ಸ್ ಕೊಟ್ಟಿದೆಯಂತೆ. ಮೊದಲ ಸಿನಿಮಾವಾದ್ದರಿಂದ ಓಂಪುರಿಗೂ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆಯಂತೆ. ಜೊತೆಗೆ ಚಿತ್ರದಲ್ಲಿ ನಟಿಸೋ ಅವಕಾಶ ಸಿಕ್ಕಿದ್ದಕ್ಕೆ ಓಂ ಫುಲ್ ಖುಷ್ ಆಗಿದ್ದಾರೆ.  
 
  ನಬೀಲ್ ಖುರೇಶಿ ನಿರ್ದೇಶನದ ಆಕ್ಟರ್ ಇನ್ ಲಾ ಚಿತ್ರತಂಡವನ್ನು ಕೂಡ ಓಂಪುರಿ ಹಾಡಿ ಹೊಗಳಿದ್ದಾರೆ.  ಚೋರ್ ಚೋರ್ ಚುಪ್ಜಾ ಸಿನೆಮಾದಿಂದ ಸಿನಿಮಾ ರಂಗಕ್ಕೆ ಕಾಲಿಟ್ಟ ನಟ  ಪಾಕಿಸ್ತಾನಿ ಜನ ಯಾವುದೇ ದ್ವೇಷ ತೋರದೆ ದಯಾಮಯವಾಗಿ ವರ್ತಿಸಿದರು ಎಂದಿದ್ದಾರೆ. ಜಗತ್ತಿನ ಎಲ್ಲಾ ಕಡೆ ಕಲಾವಿದನಿಗೆ ಸಿಗೋ ಗೌರವ ನನಗೆ ಪಾಕಿಸ್ತಾನದಲ್ಲೂ ಸಿಕ್ಕಿದೆ ಅಂದಿದ್ದಾರೆ ಹಿರಿಯ ನಟ ಓಂಪುರಿ.

ವೆಬ್ದುನಿಯಾವನ್ನು ಓದಿ