ಪದ್ಮಶ್ರೀ ಗೌರವ ನನ್ನ ಕಠಿಣ ಪರಿಶ್ರಮದ ಫಲ- ಪ್ರಿಯಾಂಕ ಛೋಪ್ರಾ

ಬುಧವಾರ, 27 ಜನವರಿ 2016 (11:15 IST)
ಅಮೇರಿಕಾದ ಟಿವಿ ಶೋ ಕ್ವಾಂಟಿಕೋ ಮೂಲಕ ವಿಶ್ವದಾದ್ಯಂತ ಮನೆ ಮಾತಾದ ನಟಿ ಪ್ರಿಯಾಂಕ ಛೋಪ್ರಾ ದೇಶದ ನಾಲ್ಕನೇ ಮಹೋನ್ನತ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಬಾರಿಯ ಪದ್ಮಶ್ರೀ ಗೌರವಕ್ಕೆ  ಪಾತ್ರವಾಗೋ ಮೂಲಕ ಬಾಲಿವುಡ್ ಅಂಗಳದ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
 
   ಈಗಾಗಲೇ ಅನೇಕ ರಾಷ್ಟ್ರಪ್ರಶಸ್ತಿ, ಅನೇಕ ಫಿಲ್ಮ್ ಫೇರ್ ಅವಾರ್ಡ್, ಮಿಸ್ ವರ್ಲ್ಡ್ ಮುಂತಾದ ಗೌರವಗಳಿಗೆ ಪಾತ್ರವಾಗಿರುವ ಪ್ರಿಯಾಂಕ ಇದೀಗ ಪದ್ಮಶ್ರೀ ಗೌರವಕ್ಕೆ ಪಾತ್ರರಾಗಿದ್ದಾರೆ.ಅಲ್ಲದೇ ಮೊನ್ನೆಯಷ್ಟೇ  ಕ್ವಾಂಟಿಕೋ ಟಿ ಶೋಗಾಗಿ ಪೀಪಲ್ಸ್ ಚಾಯ್ಸ್ ಅವಾರ್ಡ್ ಪಡೆದಿದ್ದರು. ಇದೀಗ ಪದ್ಮಶ್ರೀ ಗೌರವಕ್ಕೆ ಭಾಜನರಾಗಿರೋದು ನನಗೆ ತುಂಬಾನೇ ಖುಷಿಯಾಗಿದೆ ಅಂತಾ ಅವರು ಹೇಳಿದ್ದಾರೆ. ಅಲ್ಲದೇ ಇದು ನನ್ನ ಪರಿಶ್ರಮಕ್ಕೆ ಸಿಕ್ಕ ಪ್ರತಿಫಲ ಅಂತಾ ಅವರು ಹೇಳಿದ್ದಾರೆ.
 
ನಾನು ನನ್ನ ಕೆಲಸವನ್ನು ಯಾವತ್ತೂ ಲಘುವಾಗಿ ತೆಗೆದುಕೊಂಡಿಲ್ಲ.ಕೆಲಸ ಬಗ್ಗೆ ನನಗಿರೋ ಕಾಳಜಿಯೇ ನನ್ನನ್ನು ಇವತ್ತು ಪದ್ಮಶ್ರೀ ಪುರಸ್ಕೃತಳಾಗಿ ಮಾಡಿದೆ. ಅದಕ್ಕಾಗಿ ನಾನು ತುಂಬಾನೇ ಖುಷಿಯಾಗಿದ್ದೇನೆ.ಈ ವರ್ಷ ನನ್ನ ಪಾಲಿತೆ ಅತ್ಯಂತ ಸಂತಸದ ವರ್ಷ.ಆರಂಭದಲ್ಲೇ ನನಗೆ ಬಹುದೊಡ್ಡ ಉಡುಗೊರೆ ಸಿಕ್ಕಿದೆ. ನನಗೆ ಈ ಗೌರವ ಸಿಗಲು ಕಾರಣರಾದ ಎಲ್ಲರಿಗೂ ನಾನು ಋಣಿಯಾಗಿದ್ದೇನೆ ಅಂತಾ ಅವರು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ