ಪದ್ಮಾವತಿ ಸಿನಿಮಾ ಗೆ ತನ್ನ ಪತಿ ಪಾತ್ರದ ಆಯ್ಕೆ ಮಾಡಿದ್ದು ದೀಪಿಕಾ ಅವರೇನಾ?

ಬುಧವಾರ, 3 ಆಗಸ್ಟ್ 2016 (09:04 IST)
ಬಾಲಿವುಡ್ ನಲ್ಲಿ ದೀಪಿಕಾಪಡುಕೋಣೆ ಅವರು ಪದ್ಮಾಪತಿ ಅನ್ನೋ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಅನ್ನೋ ವಿಚಾರ ಸುದ್ದಿಯಾಗಿದ್ದಕ್ಕಿಂತ ಹೆಚ್ಚು ಸದ್ದು ಮಾಡಿದ್ದು ಸಿನಿಮಾದಲ್ಲಿ ದೀಪಿಕಾ ಪತಿಯ ಪಾತ್ರವನ್ನು ಯಾರು ಮಡುತ್ತಾರೆ ಅನ್ನೋದು.


ಸಿನಿಮಾದಲ್ಲಿ ಈ ಪಾತ್ರಕ್ಕೆ ಹತ್ತಾರು ಹೆಸರುಗಳು ಕೇಳಿ ಬಂದಿದ್ದವು.ಆದ್ರೀಗ ಈ ಬಗ್ಗೆ ಹೊಸ ವಿಚಾರವೊಂದು ಕೇಳಿ ಬರುತ್ತಿದೆ.
ಅಂದ್ಹಾಗೆ ದೀಪಿಕಾ ಅವರು ಸಂಜಯ್ ಲೀಲಾ ಬನ್ಸಾಲಿ ಅವರು ರಾಣಿ ಪದ್ಮಾವತಿ ಸಿನಿಮಾದಲ್ಲಿ ಅಭಿನಯಿಸುತ್ತಾರೆ .

ಗೊತ್ತಾದಾಗ ಅವರ ಪತಿಯ ಪಾತ್ರವನ್ನು ಯಾರು ನಿರ್ವಹಿಸುತ್ತಾರೆ ಅನ್ನೋ ಬಗ್ಗೆ ಸಾಕಷ್ಟು ಮಾತುಗಳು ಕೇಳಿ ಬಂದಿದ್ದವು. ಶಾಹೀದ್ ಕಪೂರ್, ಹೃತಿಕ್ ರೋಷನ್ , ಫವಾದ್ ಖಾನ್ ಹೀಗೆ ಅನೇಕರ ಹೆಸರುಗಳು ಕೇಳಿ ಬಂದಿದ್ದವು.ಆದ್ರೆ ಇದೀಗ ಸಿನಿಮಾದಲ್ಲಿ ತನ್ನ ಪತಿಯ ಪಾತ್ರಕ್ಕೆ ಪಾತ್ರಧಾರಿಗಳನ್ನು ದೀಪಿಕಾ ಅವರೇ ಆಯ್ಕೆ ಮಾಡುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

ಅಂದ್ಹಾಗೆ ಸಿನಿಮಾದಲ್ಲಿ ಪದ್ಮಾವತಿ ಗಂಡನ ಪಾತ್ರಕ್ಕೆ ನಟರನ್ನು ಆಯ್ಕೆ ಮಾಡುವ ಜವಬ್ದಾರಿಯನ್ನು ದೀಪಿಕಾ ಅವರೇ ಹೊತ್ತುಕೊಂಡಿದ್ದಾರೆ. ಈ ಬಗ್ಗೆ ಅವರ ಬಳಿಯೇ ಬನ್ಸಾಲಿ ಅವರು ಸಲಹೆಗಳನ್ನು ಕೇಳುತ್ತಿದ್ದಾರೆ ಅಂತಾ ಹೇಳಲಾಗುತ್ತಿದ್ದಾರಂತೆ.

ಇದುವೆರೆಗೂ ಆಯ್ಕೆಯಾದ ನಟರೆಲ್ಲಾ ಬದಲಾವಣೆಯಾಗೋದಕ್ಕೆ ದೀಪಿಕಾ ಅವರೇ ಕಾರಣ ಅಂತಾ ಹೇಳಲಾಗುತ್ತಿದೆ. ಹಾಗಾಗಿ ಈ ಪಾತ್ರಕ್ಕೆ ಕೊನೆಯದಾಗಿ ಯಾರು ಆಯ್ಕೆಯಾಗುತ್ತಾರೆ ಅನ್ನೋದು ಸಾಕಷ್ಟು ಕುತೂಹಲ ಕೆರಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

ವೆಬ್ದುನಿಯಾವನ್ನು ಓದಿ