ಪದ್ಮಾವತಿ ಸಿನಿಮಾದ ಶೂಟಿಂಗ್ ಗೆ ರೆಡಿಯಾಗಿದ್ದಾರೆ ದೀಪಿಕಾ ಪಡುಕೋಣೆ

ಶುಕ್ರವಾರ, 26 ಆಗಸ್ಟ್ 2016 (10:12 IST)
ಸಂಜಯ್ ಲೀಲಾ ಬನ್ಸಾಲಿ ಅವರ ಈ ಹಿಂದಿನ ಎರಡು ಸಿನಿಮಾಗಳಾದ ರಾಮ್ ಲೀಲಾ ಹಾಗೂ ಭಾಜೀರಾವ್ ಮಸ್ತಾನಿ ಸಿನಿಮಾದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದ ಕನ್ನಡದ ಚೆಲುವೆ ದೀಪಿಕಾ ಪಡುಕೋಣೆ ಅವರು ಇದೀಗ ಅವರ ಮುಂದಿನ ಸಿನಿಮಾ ಪದ್ಮಾವತಿಯಲ್ಲೂ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿರೋದು ನಿಮಗೆಲ್ಲಾ ಗೊತ್ತಿರುವ ವಿಚಾರ. ಇದೀಗ ಸಿನಿಮಾದ ಶೂಟಿಂಗ್ ಗಾಗಿ ದೀಪಿಕಾ ಅವರು ರೆಡಿಯಾಗಿದ್ದಾರಂತೆ.

 
ಪದ್ಮಾವತಿ ಸಿನಿಮಾದಲ್ಲಿ ದೀಪಿಕಾ ಅವರು ಅಭಿನಯಿಸುತ್ತಾರೆ ಅನ್ನೋದು ಖಚಿತವಾಗಿದ್ದರೂ ಸಿನಿಮಾದಲ್ಲಿ ದೀಪಿಕಾ ಅವರ ಪತಿಯ ಪಾತ್ರವನ್ನು ಯಾರು ಮಾಡುತ್ತಾರೆ ಅನ್ನೋದು ಕನ್ಫರ್ಮ್ ಆಗಿರಲಿಲ್ಲ.ಆದ್ರೀಗ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಯಾರು ರೆಡಿಯಾಗಿದ್ದಾರೋ ಗೊತ್ತಿಲ್ಲ. ದೀಪಿಕಾ ಅವರಂತೂ ಶೂಟಿಂಗ್ ಗಾಗಿ ರೆಡಿಯಾಗಿದ್ದಾರೆ.

ಇನ್ನು ದೀಪಿಕಾ ಅವರು ಸಿನಿಮಾದ ಶೂಟಿಂಗ್ ರೆಡಿಯಾಗಿದ್ದಾರೆ ಅಂತ ಹೇಳೋದಕ್ಕೆ ಬಲವಾದ ಕಾರಣ ಕೂಡ ಇದೆ. ಅದೇನಪ್ಪಾ ಅಂದ್ರೆ ದಿಪ್ಪಿ ಮೊನ್ನೆ ಬನ್ಸಾಲಿ ಅವರ ಸಹೋದರಿ ಬೇಲಾ ಸೆಹಗಲ್ಸ್ ಅವರ ಆಫೀಸ್ ಗೆ ಭೇಟಿ ನೀಡಿದ್ದರು. ಸಿನಿಮಾದ ಶೂಟಿಂಗ್ ಬಗ್ಗೆಯೇ ಮಾತನಾಡೋದಕ್ಕೆ ಅವರು ಅಲ್ಲಿಗೆ ತೆರಳಿದ್ದರು ಅಂತಾ ಹೇಳಲಾಗುತ್ತಿದೆ.

ಪದ್ಮಾವತಿ ಸಿನಿಮಾದಲ್ಲಿ ದೀಪಿಕಾ ಅವರ ಗೆಳೆಯ ರಣ್ ವೀರ್ ಸಿಂಗ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಅಂತಾ ಹೇಳಲಾಗುತ್ತಿದೆ.ಅ ವರು ಸಿನಿಮಾದಲ್ಲಿ ಅಲ್ಲಾವುದ್ದೀನ್ ಖಿಲ್ಜಿಯ ಪಾತ್ರವನ್ನು ನಿರ್ವಹಿಸಲಿದ್ದಾರಂತೆ.ಸದ್ಯ ಬಾಲಿವುಡ್ ನಲ್ಲಿ ಒಪ್ಪಿಕೊಂಡಿರುವ ಒಂದೇ ಒಂದೇ ಪ್ರಾಜೆಕ್ಟ್ ಅಂದ್ರೆ ಅದು ಪದ್ಮಾವತಿ. ಹಾಗಾಗಿ ಈ ಸಿನಿಮಾದ ಬಗ್ಗೆ ಅವರಿಗೂ ಸಾಕಷ್ಟು ನಿರೀಕ್ಷೆಗಳಿವೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ