ಈ ಬಾರಿ ಬಿಗ್ ಬಾಸ್-10 ಸಾಕಷ್ಟು ಕುತೂಹಲ ಮೂಡಿಸುತ್ತಿದೆ.. ಯಾಕಂದ್ರೆ ಈ ಬಾರಿ ಬಿಗ್ ಬಾಸ್-10ರ ಸ್ಪರ್ಧೆಗೆ ಭಾಗಿಯಾಗಲು ಸಾಮಾನ್ಯ ಜನರಿಗೂ ಅವಕಾಶ ನೀಡಲಾಗಿದೆ. ಅದರಲ್ಲೂ ಇಂಟರ್ಸ್ಟಿಂಗ್ ವಿಷ್ಯ ಅಂದ್ರೆ ವಿರಾಟ್ ಕೊಹ್ಲಿಗೆ ಲವ್ ಪ್ರಪೋಜ್ ಮಾಡಿ ಸುದ್ದಿ ಮಾಡಿದ್ದ ಪಾಕಿಸ್ತಾನದ ಮಾಡೆಲ್ ಕಂದಿಲ್ ಬಲೊಚ್ ಈ ಬಾರಿಯ ಬಿಗ್ ಬಾಸ್-10ರ ಸ್ಪರ್ಧೆಯಾಗಿ ಭಾಗಿವಹಿಸಲಿದ್ದಾಳಂತೆ..!
ಈ ಹಿಂದೆ ಕೂಡ ಕಂದಿಲ್ ವಿರಾಟ ಕೊಹ್ಲಿ ನಾನು ನಿನಗಾಗಿ ಹುಚ್ಚಳಾಗಿದ್ದೇನೆ, ನೀನು ಅನುಷ್ಕಾ ಶರ್ಮಳನ್ನು ಬಿಟ್ಟು ಬಿಡು, ನನ್ನ ಹತ್ತಿರ ಬಾ ಎಂದು ಪಾಕ್ನ ಮಾಡೆಲ್ ಕಂದಿಲ್ ಬಲೋಚಾ ಹೇಳಿದ್ದಳು. ವಿರಾಟ್ ಕೋಹ್ಲಿ ಮೇಲೆ ಪ್ರೀತಿ ವ್ಯಕ್ತಪಡಿಸಿದ್ದಳು.
ಈ ಹಿಂದೆ ಟಿ-20 ವಿಶ್ವಕಪ್ ಪಾಕ್ ಸೋಲಿನ ಬಳಿಕ ಭಾರತವನ್ನು ಸೋಲಿಸಿದರೆ ಪಾಕಿಸ್ತಾನ ಆಟಗಾರರಿಗಾಗಿ ಬೆತ್ತಲಾಗುತ್ತೇನೆಂದು ಹೇಳಿದ್ದ ನಟಿ ಕಂದಿಲ್ ಸೋತಾಗ ಅಸಮಾಧಾನ ವ್ಯಕ್ಯಪಡಿಸಿದ್ದಳು. ವಿಡಿಯೋವನ್ನು ಸಾಮಾಜಿಕ ಸಾಲತಾಣದಲ್ಲಿ ಹಾಕಿದ್ದಳು. ವಿಡಿಯೋದಲ್ಲಿ ಪಾಕಿಸ್ತಾನ ಸೋಲಿಗೆ ಕಣ್ಣೀರು ಹಾಕಿ, ಪಾಕ್ ಆಟಗಾರರಿಗೆ ಬೆದರಿಕೆ ಹಾಕಿದ್ದಳು. ಈ