ಬಾಲಿವುಡ್ ಸಿನಿಮಾಗಳಿಗೆ ನಿಷೇಧ ಹೇರಿದರೂ ನಷ್ಟ ಮಾತ್ರ ಪಾಕಿಸ್ತಾನಕ್ಕೆ! ಹೇಗೆ ಗೊತ್ತಾ?!

ಶುಕ್ರವಾರ, 1 ಮಾರ್ಚ್ 2019 (09:23 IST)
ಇಸ್ಲಾಮಾಬಾದ್: ಸರ್ಜಿಕಲ್ ಸ್ಟ್ರೈಕ್ ನಂತರ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಬಂಧ ಸಂಪೂರ್ಣ ಹಳಸಿದ್ದು, ಭಾರತೀಯ ಸಿನಿಮಾಗಳಿಗೆ ಪಾಕಿಸ್ತಾನದಲ್ಲಿ ನಿಷೇಧ ಹೇರಲಾಗಿದೆ.


ಆದರೆ ಇದರಿಂದ ಭಾರತಕ್ಕೆ ಯಾವುದೇ ನಷ್ಟವಾಗದು. ಬಾಲಿವುಡ್ ನ ಹೆಚ್ಚಿನ ಸಿನಿಮಾಗಳು ಪಾಕಿಸ್ತಾನದಲ್ಲೂ ಬಿಡುಗಡೆಯಾಗಿ ಭಾರೀ ಪ್ರದರ್ಶನ ಕಾಣುತ್ತವೆ. ಹಾಗಿದ್ದರೂ ಭಾರತೀಯ ಸಿನಿಮಾಗಳು ಪಾಕಿಸ್ತಾನದಲ್ಲಿ ಬಿಡುಗಡೆಯಾಗದೇ ಇರುವುದರಿಂದ ನಷ್ಟ ಅನುಭವಿಸದು. ಬದಲಾಗಿ ನಷ್ಟವಾಗಲಿರುವುದು ಪಾಕಿಸ್ತಾನಕ್ಕೆ!

ಪಾಕಿಸ್ತಾನದ ಥಿಯೇಟರ್ ಗಳಲ್ಲಿ ಬಿಡುಗಡೆಯಾಗುವ ಬಾಲಿವುಡ್ ಸಿನಿಮಾಗಳಿಂದಾಗಿಯೇ ಆ ದೇಶಕ್ಕೆ ಶೇ. 70 ರಷ್ಟು ಆದಾಯ ಬರುತ್ತದೆ. ಹೀಗಾಗಿ ಪಾಕ್ ನಲ್ಲಿ ಭಾರತೀಯ ಸಿನಿಮಾ ನಿಷೇಧಿಸುವುದರಿಂದ ಅಲ್ಲಿನ ಮನರಂಜನಾ ಕ್ಷೇತ್ರದ ಆದಾಯಕ್ಕೆ ಭಾರೀ ಕತ್ತರಿ ಬೀಳಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ