ಸೆಟ್ಟೇರಿದಾಗಿನಿಂದಲೂ ಸುದ್ದಿ ಮಾಡುತ್ತಲೇ ಬಂದಿರುವ ಫ್ಯಾಂಟಮ್ ಸಿನಿಮಾ ಇವತ್ತು ವಿಶ್ವದಾದ್ಯಂತ ರಿಲೀಸ್ ಆಗಿದೆ. ಕತ್ರೀನಾ ಕೈಫ್ ಹಾಗೂ ಸೈಫ್ ಆಲಿಖಾನ್ ಅಭಿನಯದ ಈ ಸಿನಿಮಾ ಭಾರತ ಹಾಗೂ ಪಾಕ್ ನಡುವಿನ ಕಥಾ ಹಂದರವನ್ನೇ ಹೊಂದಿದೆ. 26/11 ಮುಂಬೈ ದಾಳಿಯನ್ನು ಆಧರಿಸಿ ನಿರ್ಮಾಣವಾಗಿದೆ..
ಯುದ್ಧ ಪೀಡಿತ ಸಿರಿಯಾದಲ್ಲಿ ಈ ಸಿನಿಮಾದ ಕೆಲ ದೃಶ್ಯಗಳನ್ನು ಚಿತ್ರೀಕರಿಸಲಾಗಿದ್ದು, ಸಿನಿಮಾ ಈಗಾಗಲೇ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಸಿನಿಮಾದಲ್ಲಿ ಪಾಕ್ ಹಾಗೂ ಭಾರತ ನಡುವಿನ ಕಥಾಹಂದರವಿರೋದು ಸಿನಿಮಾದ ಬಗ್ಗೆ ಮತ್ತಷ್ಟು ಕುತೂಹಲ ಹೆಚ್ಚಿಸಿದೆ.
ಈ ಸಿನಿಮಾವನ್ನು ಕಬೀರ್ ಖಾನ್ ನಿರ್ದೇಶಿಸಿದ್ದಾರೆ. ಪ್ರೀತಂ ಸಂಗೀತ ಸಂಯೋಜಿಸಿದ್ದಾರೆ. ಈಗಾಗಲೇ ಟ್ರೇಲರ್ ಮೂಲಕ ಅಭಿಮಾನಿಗಳ ದಿಲ್ ಕದ್ದಿರುವ ಈ ಸಿನಿಮಾಕ್ಕೆ ಪ್ರೇಕ್ಷಕ ಪ್ರಭು ಎಷ್ಟು ಅಂಕ ನೀಡುತ್ತಾನೆ ಅನ್ನೋದು ಇವತ್ತು ಗೊತ್ತಾಗಲಿದೆ.