ಚೈನಾದಲ್ಲಿ 86 ಕೋಟಿ ರೂ ಗಳಿಕೆ ಮಾಡಿದ ಆಮೀರ್ ಖಾನ್ ಪೀಕೆ

ಬುಧವಾರ, 3 ಜೂನ್ 2015 (11:13 IST)
ಆಮೀರ್ ಖಾನ್ ಅವರ ನಟನೆಯ ಬಾಲಿವುಡ್ ಸೂಪರ್ ಹಿಟ್ ಚಿತ್ರ ಪೀಕೆ ಈಗ ಚೈನಾ ದೇಶದಲ್ಲೂ ಸಹಿತ ಪ್ರದರ್ಶಿತವಾಗುತ್ತಿವೆ. ಈ ಚಿತ್ರ ಮೇ 22ರಂದು ಚೈನಾ ದೇಶದಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿ ಹಣಗಳಿಸುತ್ತಿದೆ. ಈ ಪೀಕೆ ಚಿತ್ರ ಎರಡು ವಾರಗಳಲ್ಲಿ 86 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿದೆ. 

ಚೈನಾದಲ್ಲಿ ಸಿನಿಮಾ ವಿಶ್ಲೇಷಕರು ಪೀಕೆ ಬಗ್ಗೆ ಉತ್ತಮವಾದ ವಿಮರ್ಶೆಯನ್ನು ಮಾಡುತ್ತಿದ್ದಾರೆ. ರಾಜ್ ಕುಮಾರ್  ಹಿರಾನಿ ಅವರ ನಿರ್ದೇಶನದಲ್ಲಿ ಸಿದ್ಧವಾದ ಈ ಚಿತ್ರದಲ್ಲಿ ಅನುಷ್ಕ ಶರ್ಮ, ಸಂಜಯ್ ದತ್ ಅವರು ನಟಿಸಿದ್ದಾರೆ. ಭಾರತದಲ್ಲೂ ಸಹಿತ ಅತ್ಯುತ್ತಮ ಗಳಿಕೆ ಮಾಡಿದ ಪೀಕೆ ಚಿತ್ರ ಈಗ ಚೀನಾದಲ್ಲಿ ಸಹಿತ ಬಿಡುಗಡೆ ಆಗಿದ್ದು ಚೈನಾದಲ್ಲಿ ಅತ್ಯಧಿಕ ಗಳಿಕೆ ಮಾಡಿದ ಭಾರತೀಯ ಚಿತ್ರವೆನ್ನುವ ಅಗ್ಗಳಿಕೆ ಪಡೆದಿದೆ.
 
ಅಮೆರಿಕ-ಕೆನಡಾದಲ್ಲಿ ಈ ಚಿತ್ರ ಮಾಡಿದ ಗಳಿಕೆಗಿಂತ ಚೈನಾ ದೇಶದಲ್ಲಿ ಹೆಚ್ಚು ಮೊತ್ತ ಪಡೆದಿದೆ. ಚೈನಾ ದೇಶದಲ್ಲಿ ಸುಮಾರು 5ಸಾವಿರ ತೆರೆಯ ಮೇಲೆ ಈ ಚಿತ್ರ ಪ್ರದರ್ಶಿತವಾಗುತ್ತಿದೆ. 2009ರಲ್ಲಿ ಬಿಡುಗಡೆ ಆದ ತ್ರೀ ಇಡಿಯೇಟ್ಸ್ ಚಿತ್ರದಲ್ಲಿ ಸಹಿತ ಚೈನಾದಲ್ಲಿ ಹೆಚ್ಚು ಗಳಿಕೆ ಮಾಡಿತ್ತು. ಆದರೆ ಪೀಕೆ ಚಿತ್ರ ಅದಕ್ಕಿಂತ ಹೆಚ್ಚು ಗಳಿಕೆ ಮಾಡಿದೆ. 

ವೆಬ್ದುನಿಯಾವನ್ನು ಓದಿ