ಪ್ರೇಮಿಗಳ ದಿನಕ್ಕೆ ಪೂನಂ ಪಾಂಡೆ ವಿಡಿಯೋ

ಸೋಮವಾರ, 13 ಫೆಬ್ರವರಿ 2017 (15:53 IST)
ಟ್ವಿಟ್ಟರ್‌ನಲ್ಲಿ ರಾಣಿ ಎಂದೇ ಕರೆಸಿಕೊಂಡವರು ಪೂನಂ ಪಾಂಡೆ. ಸಾಮಾಜಿಕ ಮಾಧ್ಯಮಗಳಲ್ಲಿ ಹೇಗೆಲ್ಲಾ ಆಟ ಆಡಬಹುದು ಎಂಬುದನ್ನು ಅರಿತು ಕುಡಿತ ಬೆಡಗಿಯಲ್ಲಿ ಪೂನಂ ಪಾಂಡೆ ಸಹ ಒಬ್ಬರು. ಇದೀಗ ಪ್ರೇಮಿಗಳ ದಿನಕ್ಕೆ ಅಣಿಯಾಗುತ್ತಿದ್ದಾರೆ ಪೂನಂ.
 
ವ್ಯಾಲೆಂಟೇನ್ಸ್ ದಿನ ಹಾಟ್ ವಿಡಿಯೋ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿದ್ದಾಳೆ. ಈಗಾಗಲೆ ಅದೇ ಕೆಲಸದಲ್ಲಿ ಮಗ್ನರಾಗಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ಮಾತ್ರ ಬಿಡುಗಡೆ ಮಾಡಿದ್ದು ಶೀಘ್ರದಲ್ಲೇ ವಿಡಿಯೋ ನಿರೀಕ್ಷಿಸಿ ಎಂದಿದ್ದಾರೆ.
 
ಕಪ್ಪು ಒಳಉಡುಪಿನಲ್ಲಿ ಈಗಾಗಲೆ ಪಡ್ಡೆಗಳ ಕೆಣಕಿದ್ದಾಳೆ ಪೂನಂ. ಇನ್ನು ವಿಡಿಯೋ ಎಂದರೆ ಏನೆಲ್ಲಾ ಇರುತ್ತದೋ ಏನೋ ಎಂದು ಪಡ್ಡೆಗಳು ಒಳಗೊಳಗೆ ಖುಷಿಯಾಗಿದ್ದಾರೆ. ಬೋಲ್ಡ್ ಮಾತು ಮತ್ತು ಹಸಿಬಿಸಿ ಫೋಟೋಗಳಿಗೆ ಹೆಸರಾದವರು ಪೂನಂ ಪಾಂಡೆ. ಈ ಬಾರಿ ಏನು ಮಾಡುತ್ತಾಳೋ ಏನೋ ಎಂಬ ಆತಂಕ ಮೂಡಿಸಿದ್ದಾಳೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ