ವಿದ್ಯಾ ಬಾಲನ್ ಅಭಿನಯದ 'ಏಕ್ ಅಲ್ಬೇಲಾ' ಚಿತ್ರದ ಪೋಸ್ಟರ್ ರಿಲೀಸ್

ಶನಿವಾರ, 28 ಮೇ 2016 (17:20 IST)
ವಿದ್ಯಾ ಬಾಲನ್ ಅಭಿನಯದ ಮರಾಠಿ ಏಕ್ ಅಲ್ಬೇಲಾ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ವಿದ್ಯಾ ಬಾಲನ್ ಮರಾಠಿ ಚಿತ್ರ  'ಏಕ್ ಅಲ್‌ಬೇಲಾ' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮರಾಠಿ ನಟಿ ಗೀತಾ ಬಾಲಿಯವರ ಪಾತ್ರದಲ್ಲಿ ವಿದ್ಯಾ ಬಾಲನ್ ಕಾಣಿಸಿಕೊಳ್ಳಲಿದ್ದಾರೆ.
ಡಾ. ಮೋನಿಶ್ ಬಾಬ್ರಿ ಹಾಗೂ ಕಾಮ್ಯಾ ಸಹ ಭಾಗಿತ್ವದಲ್ಲಿ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಇನ್ನೂ ಚಿತ್ರದ ನಿರ್ದೇಶನ ಶೇಖರ್, ಈ ಚಿತ್ರವು ಭಗವಾನ್ ದಾದಾ ಕುರಿತಾಗಿದ್ದು, ಹಿಂದಿ ಚಿತ್ರರಂಗದ ಜನಪ್ರಿಯ ನಾಯಕಿ ರಿಷಿ ಕಪೂರ್ ಪತ್ನಿಯಾಗಿದ್ದ ಗೀತಾ ಬಾಲಿ ಅವರ ಪಾತ್ರದಲ್ಲಿ ವಿದ್ಯಾ ಬಾಲನ್ ಜತೆಗೆ ಸ್ಕ್ರೀನ್ ಮೇಲೆ ಕಾಣಿಸುತ್ತಿದ್ದಾರೆ.
 
ಮರಾಠಿಯಲ್ಲಿ ತಯಾರಾಗುತ್ತಿರುವ 'ಏಕ್ ಅಲಬೇಲಾ' ಚಿತ್ರದ ಫಸ್ಟ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಚಿತ್ರದಲ್ಲಿ ವಿದ್ಯಾ ಬಾಲನ್ ನ್ಯೂ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. 50ರ  ದಶಕದ ನಟಿಯ ಮೇಕಪ್ ಹಾಗೂ ಕಾಸ್ಟ್ಯೂಮ್ ‌ಗಳನ್ನು ತಕ್ಕ ಹಾಗೆ ವಿದ್ಯಾಗೆ ಡಿಸೈನ್ ಮಾಡಲಾಗಿದೆ.

ಇನ್ನೂ ಮೇಕಪ್ ಆರ್ಟಿಸ್ಟ್ ವಿದ್ಯಾಧರ ಭಟ್ ಮಾಡಿದ್ದಾರಂತೆ. ಕಾಸ್ಟ್ಯೂಮ್ಸ್ ಡಿಸೈನ್ ಸುಬ್ರನ್ ರಾಯ್ ಚೌಧರಿ ಅವರದ್ದಾಗಿದೆ. ಚಿತ್ರ ಜೂನ್ 24ಕ್ಕೆ ರಿಲೀಸ್ ಆಗಲಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ