ಮುಂಬೈಯಲ್ಲಿ ನಟಿ ಪ್ರೀತಿ ಜಿಂಟಾ ರಿಶಪ್ಶನ್ ಆಯೋಜನೆ

ಮಂಗಳವಾರ, 10 ಮೇ 2016 (11:19 IST)
ಪ್ರೀತಿ ಜಿಂಟಾ ಮೊನ್ನೆ ತನ್ನ ಪತಿ ಜೀನ್‌ರೊಂದಿಗೆ ಭಾರತಕ್ಕೆ ಆಗಮಿಸಿದ್ದು ನಿಮಗೆಲ್ಲಾ ಗೊತ್ತೆ ಇದೆ. ಇದರ ಬೆನ್ನಲ್ಲೇ ಪ್ರೀತಿ ಟಿಂಟಾ ಮದುವೆ ರಿಶ್ಪಶನ್ ಪಾರ್ಟಿ ಆಯೋಜನೆ ಮಾಡಿದ್ದಾರೆ. ಮೇ 13ರಂದು ರಿಶಪ್ಶನ್ ಆಯೋಜಿಸಲಾಗಿದೆ. ರಿಶಪ್ಶನ್ ಪಾರ್ಟಿಗೆ ಬಾಲಿವುಡ್‌ನ ಹಲವರು ಆಗಮಿಸಲಿದ್ದಾರೆ. 

 
ಬಾಲಿವುಡ್ ನಟಿ ಪ್ರೀತಿ ಜಿಂಟಾ ಪತಿ ಜೀನ್ ಜತೆಗೆ ಭಾರತಕ್ಕೆ ಆಗಮಿಸಿದ್ರು.. ಈ ವೇಳೆ ಜತೆಗೆ ಜೀನ್ ತಂದೆ-ತಾಯಿ ಕೂಡ ಜತೆಯಲ್ಲಿದ್ದರು. ಭಾರತಕ್ಕೆ ಜೀನ್ ಆಗಮಿಸಿದ್ದು ತಮ್ಮ ಫ್ರೆಂಡ್ಸ್ ಜತೆಗೆ ರಿಶಪ್ಶನ್ ನೀಡುವುದಕ್ಕಾಗಿ...
 
ಅಲ್ಲದೇ ಜೀನ್‌ ಅಪ್ಪ-ಅಮ್ಮ ಭಾರತಕ್ಕೆ ಆಗಮಿಸಿದ ಬೆನ್ನಲ್ಲೆ ಪ್ರೀತಿ ಟಿಂಟಾ ಪತಿ ನೇರವಾಗಿ ಚಂಡಿಗಢ್‌ದ ನಿವಾಸಕ್ಕೆ ತೆರಳಿದ್ದರು.. ಶಿಮ್ಲಾ ಪ್ರೀತಿ ಟಿಂಟಾ ಹುಟ್ಟಿ ಬೆಳೆದ ಊರು. ಅಲ್ಲಿಯೇ ಪ್ರೀತಿ ಮದರ್ಸ್ ಡೇ ಸೆಲೆಬ್ರೆಟ್ ಮಾಡಿದ್ದಾರೆ.
 
42 ಹರೆಯದ ಪ್ರೀತಿ ಜಿಂಟಾ ತಮ್ಮ ಬಹುದಿನದ ಗೆಳೆಯ ಅಮೆರಿಕಾದ ಜೀನ್‌ರೊಂದಿಗೆ ಸಪ್ತಪದಿ ತುಳಿದಿದ್ದಾರೆ. ಲಾಸ್ ಏಜಲೀಸ್‌ನ ಫೆ.29ರಂದು ಆಯೋಜಿಸಲಾಗಿದ್ದ ಖಾಸಗಿ ಸಮಾರಂಭದಲ್ಲಿ ಪ್ರೀತಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.
 
ಭಾರತೀಯ ಸಂಪ್ರದಾಯದಂತೆ ಪ್ರೀತಿ ಮದುವೆಯಾಗಿದ್ದಾರೆ. ಇನ್ನೂ ಜೀನ್ ಅಮೆರಿಕಾದಲ್ಲಿ ಉದ್ಯಮಿಯಾಗಿದ್ದು, ಪ್ರೀತಿ ಜಿಂಟಾಕ್ಕಿಂತ ಸುಮಾರು 10 ವರ್ಷ ಚಿಕ್ಕವರಾಗಿದ್ದಾರೆ ಜೀನ್.ಕಳೆದ ದಿನಗಳ ಹಿಂದೆ ಪ್ರೀತಿ ಜಿಂಟಾ ಹಾಗೂ ಜೀನ್ ಸಂಬಂಧದ ಬಗ್ಗೆ ಗಾಸಿಪ್ ಹರಡಿತ್ತು.. ಇಬ್ಬರ ಮಧ್ಯೆ ಅಫೇರ್ ಇರುವುದು ಗೊತ್ತಾಗಿತ್ತು.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ