Anurag Kashyap: ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನಿವಾಗ ಎಂದ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು

Krishnaveni K

ಶುಕ್ರವಾರ, 18 ಏಪ್ರಿಲ್ 2025 (20:34 IST)
Photo Credit: X
ಮುಂಬೈ: ಬ್ರಾಹ್ಮಣರ ಮೇಲೆ ಮೂತ್ರಿ ವಿಸರ್ಜಿಸುತ್ತೇನೆ. ಏನಿವಾಗ? ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಿರುದ್ಧ ದೂರು ದಾಖಲಾಗಿದೆ.
 

ಸಮಾಜ ಸುಧಾರಕರಾದ ಜ್ಯೋತಿರಾವ್ ಮತ್ತು ಸಾವಿತ್ರಿಭಾಯಿ ಪುಲೆ ಅವರ ಜೀವನ ಚರಿತ್ರೆಯಾದ ಪುಲೆ ಚಿತ್ರದಲ್ಲಿ ಬ್ರಾಹ್ಮಣ ಸಮುದಾಯವನ್ನು ಕೀಳಾಗಿ ತೋರಿಸಲಾಗಿದೆ ಎಂದು ವಿವಾದ ಸೃಷ್ಟಿಯಾಗಿದೆ. ಈ ವಿಚಾರವಾಗಿ ಅವರು ಸೆನ್ಸಾರ್ ಬೋರ್ಡ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ದೇಶದಲ್ಲಿ ಜಾತಿ ಪದ್ಧತಿ ಇರಲಿಲ್ಲವೆಂದರೆ ಈ ಇಬ್ಬರು ಸಮಾಜ ಸುಧಾರಕರು ಯಾಕೆ ಹೋರಾಡಬೇಕಿತ್ತು? ಮೋದಿ ಪ್ರಕಾರ ಭಾರತದಲ್ಲಿ ಜಾತಿವಾದವಿಲ್ಲ. ಆದ್ದರಿಂದ ನಿಮ್ಮ ಬ್ರಾಹ್ಮಣ ಸಮುದಾಯವೂ ಇಲ್ಲ ಎಂದರ್ಥ. ಎಲ್ಲರೂ ಒಟ್ಟಾಗಿ ಎಲ್ಲರನ್ನೂ ಮರುಳು ಮಾಡುತ್ತಿದ್ದಾರೆ. ದೇಶದಲ್ಲಿ ಜಾತಿವಾದವಿದೆಯೋ ಇಲ್ಲವೋ ಎಂದು ಎಲ್ಲೂ ಒಟ್ಟಾಗಿ ಸೇರಿ ನಿರ್ಧರಿಸಿ. ಜನರು ಮೂರ್ಖರಲ್ಲ.

ಅನುರಾಗ್ ಪೋಸ್ಟ್ ಗೆ ವ್ಯಕ್ತಿಯೊಬ್ಬರು ಪೋಸ್ಟ್ ಮಾಡಿ ಬ್ರಾಹ್ಮಣ ನಿಮ್ಮಪ್ಪ ಎಂದು ಕಾಮೆಂಟ್ ಹಾಕಿದ್ದರು. ಇದಕ್ಕೆ ಕಶ್ಯಪ್ ‘ಬ್ರಾಹ್ಮಣರ ಮೇಲೆ ಮೂತ್ರ ವಿಸರ್ಜಿಸುತ್ತೇನೆ ಏನೀಗ’ ಎಂದು ವಿವಾದಾತ್ಮಕವಾಗಿ ಉತ್ತರಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ವಕೀಲ, ಬಿಜೆಪಿ ಸೋಷಿಯಲ್ ಮೀಡಿಯಾ ಮತ್ತು ಕಾನೂನು ಸಲಹೆಗಾರ ಆಶುತೋಷ್ ದುಬೆ ಎಂಬವರು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ