ವಿವಾಹಕ್ಕೆ ರೆಡಿಯಾದ್ರು ಗುಳಿಕೆನ್ನೆ ಚೆಲುವೆ ಪ್ರೀತಿ ಝಿಂಟಾ

ಬುಧವಾರ, 10 ಫೆಬ್ರವರಿ 2016 (10:57 IST)
ಬಾಲಿವುಡ್ ನಟಿಯರು ಈಗೀಗ ವಿವಾಹದ ಕಡೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ಮೊನ್ನೆಯಷ್ಟೇ ನಟಿ ಗೀತಾ ಬಾಸ್ರಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರನ್ನು ವರಿಸಿದ್ರೆ, ಆಸಿನ್ ಮೈಕ್ರೋ ಮ್ಯಾಕ್ಸ್ ಸಂಸ್ಥಾಪಕ ರಾಹುಲ್ ಶರ್ಮಾ ಅವರನ್ನು ವರಿಸಿದ್ದರು. ಇದೀಗ ಪ್ರೀತಿ ಝಿಂಟಾ ಅವರ ವಿವಾಹವಾಗೋದಕ್ಕೆ ರೆಡಿಯಾಗಿದ್ದಾರೆ.

ಅಂದ್ಹಾಗೆ ಪ್ರೀತಿ ಮದುವೆ ಯಾವಾಗಪ್ಪಾ ಅಂತಾ ನೀವು ತಲೆ ಕೆಡಿಸಿಕೊಳ್ಳಬೇಡಿ ಯಾಕಂದ್ರೆ ಪ್ರೀತಿ ಇದೇ ವಾರ ವಿವಾಹವಾಗುತ್ತಿದ್ದಾರೆ.ಸಾಮಾಜಿಕ ಜಾಲತಾಣಗಳ ಮಾಹಿತಿ ಪ್ರಕಾರ ಇದೇ ವಾರ ಪ್ರೀತಿ ಲಾಸ್ ಏಂಜಲೀಸ್ ನಲ್ಲಿ ತನ್ನ ಪ್ರಿಯಕರ ಜೇನೆ ಗುಡ್ ಇನ್ಫ್ ಅವರನ್ನು ವಿವಾಹವಾಗುತ್ತಿದ್ದಾರಂತೆ.ಇನ್ನು ಫೆಬ್ರವರಿ 12 ರಿಂದ 16ರವರೆಗೆ 5 ದಿನಗಳ ಕಾಲ ಮದುವೆಯ ಸಮಾರಂಭ ನಡೆಯಲಿದೆಯಂತೆ.ಅಲ್ಲದೇ ಬಾಲಿವುಡ್ ನ ಕೆಲ ತಾರೆಯರು ಕೂಡ ವಿವಾಹಕ್ಕಾಗಿ ಲಾಸ್ ಏಂಜಲೀಸ್ ಗೆ ಹಾರಲಿದ್ದಾರಂತೆ.
 
ಇನ್ನು ಪ್ರೀತಿ ಹಾಗೂ ಜೇನೆ ಗುಡ್ ಇನ್ಫ್ ಮಧ್ಯೆ 2015ರ ಐಪಿಎಲ್ ಪಂದ್ಯದ ವೇಳೆ ಪ್ರೀತಿ ಚಿಗುರೊಡೆದಿತ್ತು. ಕಳೆದ 18 ತಿಂಗಳಿನಿಂದ ಅವರಿಬ್ಬರು ಡೇಟಿಂಗ್ ನಲ್ಲಿ ತೊಡಗಿದ್ದರು. ಇದೀಗ ತಮ್ಮ ಸಂಬಂಧಕ್ಕೆ ವಿವಾಹದ ಮೂಲಕ ಅರ್ಥ ನೀಡಲು ಹೊರಟಿದ್ದಾರೆ. ಕೆಲ ತಿಂಗಳ ಹಿಂದೆ ಪ್ರೀತಿ ಜನವರಿಯಲ್ಲಿ ವಿವಾಹವಾಗ್ತಾರೆ ಅನ್ನೋ ಬಗ್ಗೆ ಮಾತುಗಳು ಕೇಳಿ ಬಂದಿದ್ದವು.

ವೆಬ್ದುನಿಯಾವನ್ನು ಓದಿ