ಕಲೆಕ್ಷನ್ ನಲ್ಲಿ 200 ಕೋಟಿ ಗಡಿ ದಾಟಿದ ಪ್ರೇಮ್ ರತನ್ ಧನ್ ಪಾಯೋ

ಶನಿವಾರ, 28 ನವೆಂಬರ್ 2015 (10:50 IST)
ಪ್ರೇಮ್ ರತನ್ ಧನ್ ಪಾಯೋ ಸಿನಿಮಾ  ಬಿಡುಗಡೆಯಾಗಿ ಎರಡು ವಾರಗಳು ಕಳೆದ್ರೂ ಕೂಡ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುತ್ತಿದೆ. ಬಿಡುಗಡೆಯಾದ ಮೊದಲ ದಿನವೇ ಪ್ರೇಮ್ ರತನ್ ಧನ್ ಪಾಯೋ ಸಿನಿಮಾ 40 ಕೋಟಿ ಭರ್ಜರಿ ಕಲೆಕ್ಷನ್ ಮಾಡಿತ್ತು. ಬಳಿಕ ಸಿನಿಮಾ ಬಿಡುಗಡೆಯಾದ ಮೂರನೇ ದಿನ ನೂರು ಕೋಟಿ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ನಲ್ಲಿ ನಿರ್ಮಿಸುವ ಸೂಚನೆ ಕೊಟ್ಟಿತ್ತು. ಇದೀಗ ಆ ಸೂಚನೆ ನಿಜವಾಗಿದೆ. ಸಿನಿಮಾ ಇನ್ನೂರು ಕೋಟಿ ಕ್ಲಬ್ ಸೇರಿದೆ. ಇದುವೆರೆಗೂ 201.52 ಕೋಟಿ ಕಲೆಕ್ಷನ್ ಮಾಡಿದೆ.

ಎರಡನೇ ವಾರದಲ್ಲಿ ಶುಕಿರವಾರ 5.50 ಕೋಟಿ ರೂಪಾಯಿ, ಶನಿವಾರ 6.70ಕೋಟಿ ರೂ ಹಾಗೇ ಭಾನುವಾರ 8.20 ಕೋಟಿ, ಸೋಮವಾರ 2.70 ಕೋಟಿ ರೂಪಾಯಿ, ಹಾಗೇ ಮಂಗಳವಾರ ಹಾಗೂ ಬುಧವಾರ ತಲಾ 2.70 ಕೋಟಿ ರೂಪಾಯಿ ಹಾಗೂ 2.90 ಕೋಟಿ ರೂಪಾಯಿ ಕಲೆಕ್ಷನ್ ಮಾಡುವ ಮೂಲಕ ಬಾಕ್ಸಾಫೀಸ್ ನಲ್ಲಿ ತನ್ನ ನಾಗಲೋಟವನ್ನು ಮುಂದುವರೆಸಿದೆ. ಅಲ್ಲದೇ 2015ರಲ್ಲಿ  ಬಿಡುಗಡೆಯಾದ ರೋಮ್ಯಾಂಟಿಕ್ ಸಿನಿಮಾಗಳಲ್ಲಿ  200 ಕೋಟಿ ಕ್ಲಬ್ ಸೇರಿದ ಎರಡನೇ ಸಿನಿಮಾ ಎಂಬ ಹೆಗ್ಗಳಿಕೆಗೆ ಪ್ರೇಮ್ ರತನ್ ಧನ್ ಪಾಯೋ ಸಿನಿಮಾ ಪಾತ್ರವಾಗಿದೆ. ಈ ಹಿಂದೆ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಸಿನಿಮಾ 200 ಕೋಟಿ ಕ್ಲಬ್ ಸೇರಿತ್ತು.
 
ಸಿನಿಮಾದಲ್ಲಿ ಸಲ್ಮಾನ್ ಖಾನ್ ಗೆ ನಾಯಕಿಯಾಗಿ ಸೋನಮ್ ಕಪೂರ್ ಕಾಣಿಸಿಕೊಂಡಿದ್ದಾರೆ. ಇನ್ನುಳಿದಂತೆ ಅನುಪಮ್ ಖೇರ್, ಸ್ವರ ಭಾಸ್ಕ್ರರ್ ಅರ್ಮಾನ್ ಕೊಹ್ಲಿ, ನೀಲ್ ನಿತನ್ ಮುಖೇಶ್ ಕಾಣಿಸಿಕೊಂಡಿದ್ದಾರೆ. ಸೂರಜ್ ಭರ್ಜಾತಿಯಾ ಸಿನಿಮಾಗೇ ಆಕ್ಷನ್ ಕಟ್ ಹೇಳಿದ್ದಾರೆ.16 ವರ್ಷಗಳ ಬಳಿಕ ಈ ಸಿನಿಮಾದ ಮೂಲಕ ಸೂರಜ್ ಹಾಗೂ ಸಲ್ಮಾನ್ ಜೊತೆಯಾಗಿ ಕೆಲಸ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ