ಪ್ರಿಯಾಂಕ ಛೋಪ್ರಾ ಕಿರೀಟಕ್ಕೆ ಮತ್ತೊಂದು ಗರಿ

ಬುಧವಾರ, 3 ಫೆಬ್ರವರಿ 2016 (12:05 IST)
2016ರ ಯಾವ ತಾರೆಯರ ಪಾಲಿಗೆ ಏನ್ ಖುಷಿ ನೀಡುತ್ತೋ ಗೊತ್ತಿಲ್ಲ.ಆದ್ರೆ ನಟಿ ಪ್ರಿಯಾಂಕ ಛೋಪ್ರಾ ಅವರಿಗೆ ಮಾತ್ರ ಈ ವರ್ಷ ಅತ್ಯಂತ ಸಂತಸದ ವರ್ಷ ಅನ್ನೋದು ಆರಂಭದಲ್ಲೇ ಗೊತ್ತಾಗಿದೆ. ಕಳೆದ ವರ್ಷ ಅಮೆರಿಕ ದೂರದರ್ಶನ ನಡೆಸಿದ ಪೀಪಲ್ಸ್ ಚಾಯ್ಸ್ ಪ್ರಶಸ್ತಿಗೆ ಭಾಜನರಾಗಿದ್ದ ಮಾಜಿ ಬಾಲಿವುಡ್ ತಾರೆ ಪ್ರಿಯಾಂಕ ಚೋಪ್ರಾ ಈಗ ಚಿತ್ರ ಜಗತ್ತಿನ ಅತ್ಯುನ್ನತ ಪ್ರಶಸ್ತಿಯಾದ ಆಸ್ಕರ್ ಪ್ರಶಸ್ತಿ ವಿತರಣೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ.
 
  ಫೆಬ್ರವರಿ 29 ರಂದು ನಡೆಯಲಿರುವ 88ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಿಯಾಂಕ ಛೋಪ್ರಾ ಅತಿಥಿಯಾಗಿ ಭಾಗವಹಿಸಲಿದ್ದಾರೆ.ಅಲ್ಲದೇ ಹಾಲಿವುಡ್ ನಟ ನಟಿಯರು ಆಸ್ಕರ್ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಆಸ್ಕರ್ನಂ8ತಹ ಪ್ರತಿಷ್ಠಿತ ವೇದಿಕೆಯಲ್ಲಿ ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಲು ಅವಕಾಶ ಸಿಕ್ಕಿದ್ದಕ್ಕೆ ಪ್ರಿಯಾಂಕ ಚೋಪ್ರಾ ಫುಲ್ ಖುಷಿಯಾಗಿದ್ದಾರೆ.ಅಲ್ಲದೇ ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದಾರೆ.
 
 ಇನ್ನು ಈ ವರ್ಷ ಪಿಗ್ಗಿಗೆ ಡಬಲ್ ಸಂತೋಷ. ಮೊನ್ನೆಯಷ್ಟೇ ಪದ್ಮಶ್ರೀ ಪ್ರಶಸ್ತಿಗೆ ಗೌರವಕ್ಕೆ ಪಾತ್ರರಾಗಿದ್ದರು. ಇದೀಗ ಆಸ್ಕರ್ ವೇದಿಕೆಯಲ್ಲಿ ಕಾಣಿಸಿಕೊಳ್ಳುತ್ತಿರೋದು ಪ್ರಿಯಾಂಕ ವೃತ್ತಿ ಬದುಕಿನ ಬಹು ದೊಡ್ಡ ಸಾಧನೆ.

ವೆಬ್ದುನಿಯಾವನ್ನು ಓದಿ