ಸಿಕ್ಕಿಂ ವಿಚಾರದಲ್ಲಿ ಎಡವಟ್ಟು ಹೇಳಿಕೆ ನೀಡಿ ಕ್ಷಮೆ ಕೇಳಿದ ಪ್ರಿಯಾಂಕ ಚೋಪ್ರಾ

ಶುಕ್ರವಾರ, 15 ಸೆಪ್ಟಂಬರ್ 2017 (09:41 IST)
ನವದೆಹಲಿ: ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ತಮ್ಮ ನಿರ್ಮಾಣದ ಸಿನಿಮಾವೊಂದರ ಬಗ್ಗೆ ಮಾತನಾಡುತ್ತಾ ಸಿಕ್ಕಿಂ ರಾಜ್ಯದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿ ಇದೀಗ ಕ್ಷಮೆ ಯಾಚಿಸಿದ್ದಾರೆ.

 
‘ಪಹುನಾ: ದ ಲಿಟಲ್ ವಿಸಿಟರ್ಸ್’ ಎಂಬ ಸಿನಿಮಾವೊಂದನ್ನು ಪ್ರಿಯಾಂಕ ನಿರ್ಮಿಸಿದ್ದಾರೆ. ಚಿತ್ರದ ಬಗ್ಗೆ ಸಂವಾದವೊಂದರಲ್ಲಿ ಮಾತನಾಡುವಾಗ ಪ್ರಿಯಾಂಕ ಇದು ಸಿಕ್ಕಿಂ ಸಿನಿಮಾ. ಇದುವರೆಗೆ ಯಾರೂ ಆ ರಾಜ್ಯದಲ್ಲಿ ಸಿನಿಮಾ ಮಾಡಿಲ್ಲ. ಅಲ್ಲಿನ ರಾಜಕೀಯ ಸಂಘರ್ಷ, ಬಂಡಾಯಗಳ ನಡುವೆ ಇದೇ ಮೊದಲ ಬಾರಿಗೆ ಸಿನಿಮಾವೊಂದು ಮೂಡಿ ಬರಲು ಸಾಧ್ಯವಾಗಿದೆ ಎಂದಿದ್ದರು.

ಆದರೆ ಸಿಕ್ಕಿಂ ರಾಜ್ಯವನ್ನು ಸಂಘರ್ಷ ಭರಿತ ನಾಡು ಎಂದು ಪ್ರಿಯಾಂಕ ಹೇಳಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಯ್ತು. ಸಿಕ್ಕಿಂನಲ್ಲಿ ಕಳೆದ ಎರಡು ದಶಕಗಳಿಂದ ಯಾವುದೇ ಉದ್ವಿಗ್ನ ವಾತಾವರಣವಿಲ್ಲ. ಇದು ಶಾಂತಿ ಪ್ರಿಯ ನಾಡು ಎಂದು ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ. ಈ ಹಿನ್ನಲೆಯಲ್ಲಿ ಸರ್ಕಾರಕ್ಕೆ ಪತ್ರ ಬರೆದ ಪ್ರಿಯಾಂಕ ಕ್ಷಮೆ ಕೋರಿದ್ದಾರೆ.

ಇದನ್ನೂ ಓದಿ.. ಧೋನಿ ಇಲ್ಲದ ಮೇಲೆ ಟೀಂ ಇಂಡಿಯಾ ಇದ್ದೀತೇ?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ