ಸನ್ನಿ ಲಿಯೋನ್ ಚಿತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ ಪ್ರಿಯಾಂಕಾ ಛೋಪ್ರಾ

ಗುರುವಾರ, 25 ಫೆಬ್ರವರಿ 2016 (17:14 IST)
ಬಾಲಿವುಡ್‌ನಲ್ಲಿ ನಟಿ-ನಟಿಯರು ಪರಸ್ಪರ ಹೊಗಳೋದು ಕಮ್ಮಿ, ಒಬ್ಬರ ಕಂಡರೆ ಮತ್ತೊಬ್ಬರಿಗೆ ಆಗಲ್ಲ.. ಅಂಥರಲ್ಲಿ ಬಾಲಿವುಡ್ ನಟಿ ಪ್ರಿಯಾಂಕ ಛೋಪ್ರಾ ಸನ್ನಿ ಲಿಯೋನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. '11 ನಿಮಿಷ' ಕಿರುಚಿತ್ರದಲ್ಲಿ ಧೂಮಪಾನ ವಿರೋಧಿ ಬಗ್ಗೆ ತೋರಿಸಲಾಗಿದೆ.


'11 ನಿಮಿಷ' ಕಿರುಚಿತ್ರವು 'ಧೂಮಪಾನ್ ವಿರೋಧಿ' ಅಂಶಗಳ ಕುರಿತು ಮಾಹಿತಿ ನೀಡುವುದಲ್ಲದೇ, ಸ್ಮೋಕ್ ಮಾಡದಂತೆ ಸಂದೇಶ ನೀಡುವ ಚಿತ್ರ ಇದಾಗಿದೆ. 'ಧೂಮಪಾನ ವಿರೋಧಿ' ಸಿನಿಮಾದಲ್ಲಿ ಸನ್ನಿ ಲಿಯೋನ್ ನಟಿಸಿದ್ದಾರೆ.

ಚಿತ್ರದಲ್ಲಿ ಜೀವನದ ಕೆಲವೇ ಕ್ಷಣಗಳ ಬಗ್ಗೆ  ಬಿಂಬಿಸಲಾಗಿದೆ. ಹೀಗಾಗಿ '11 ನಿಮಿಷ' ಕಿರುಚಿತ್ರ  ಪಿಗ್ಗಿಗೆ ಇಷ್ಟವಾಗಿದ್ದು, ಉತ್ತಮವಾದ ಚಿತ್ರ ಎಂದರಲ್ಲದೇ, ಸನ್ನಿ ಲಿಯೋನ್ ವಿಭಿನ್ನವಾಗಿ ನಟಿಸಿದ್ದಾರೆ ಎಂದು ಟ್ವಿಟರ್‌ನಲ್ಲಿ ಪ್ರಿಯಾಂಕಾ ಛೋಪ್ರಾ ಹೇಳಿದ್ದಾರೆ.

ಚಿತ್ರದಲ್ಲಿ ಸನ್ನಿ ಲಿಯೋನ್ ಸೇರಿದಂತೆ ನಟ ಅಲೋಕ್ ನಾಥ್, ದೀಪಕ್ ದೋಬ್ರಿಯಾಲ್ ಕೂಡ ನಟಿಸಿದ್ದಾರೆ.

ಸನ್ನಿ ಲಿಯೋನ್ ಕೂಡ ಪಿಗ್ಗಿಗೆ ಧನ್ಯವಾದ ತಿಳಿಸಿದ್ದಾರೆ. ಈ ಬಗ್ಗೆ ಟ್ವಿಟ್ ಮಾಡಿರುವ ಸನ್ನಿ ಲಿಯೋನ್, 'ಧೂಮಪಾನ್ ವಿರೋಧಿ' ಚಿತ್ರದ ಮೂಲಕ ಜನರಿಗೆ ಉತ್ತಮ ಸಂದೇಶ ತಲುಪಲಿದೆ ಅಂತ ಆಶಯ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ