ಪ್ರಿಯಾಂಕಾ ಚೋಪ್ರಾ ಪಂಜಾಬಿ ಚಿತ್ರ ಡಿಸೆಂಬರ್ ನಲ್ಲಿ ಬಿಡುಗಡೆ

ಶನಿವಾರ, 12 ನವೆಂಬರ್ 2016 (10:10 IST)
ಮುಂಬೈ: ಪ್ರಿಯಾಂಕಾ ಚೋಪ್ರಾ ಇತ್ತೀಚೆಗೆ ಬೇರೆ ಬೇರೆ ಕಾರಣಕ್ಕೆ ಸುದ್ದಿಯಾಗುತ್ತಿದ್ದಾರೆ. ಇತ್ತೀಚೆಗಷ್ಟೇ ಮರಾಠಿ ಚಿತ್ರವೊಂದರಲ್ಲಿ ನಟಿಸಿದ್ದ ಪ್ರಿಯಾಂಕಾ ಇದೀಗ ಪಂಜಾಬಿ ಸಿನಿಮಾವೊಂದನ್ನು ನಿರ್ಮಿಸಿದ್ದು, ಡಿಸೆಂಬರ್ ನಲ್ಲಿ ಬಿಡುಗಡೆಯಾಗಲಿದೆ.

ಸರ್ವಾನ್ ಎಂದು ಚಿತ್ರದ ಹೆಸರು. 34 ವರ್ಷದ ಪ್ರಿಯಾಂಕಾ ಇದರ ಜೊತೆಗೆ ಅಮೆರಿಕದ ಟಿವಿ ಸರಣಿಯೊಂದರ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಆಕೆಯ ನಿರ್ಮಾಣ ಸಂಸ್ಥೆ ಪರ್ಪಲ್ ಪೆಬ್ಬಲ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಿರ್ಮಿಸಿದ ಎರಡನೇ ಚಿತ್ರ ಇದಾಗಿದೆ.

ಈ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿರುವ ಪ್ರಿಯಾಂಕ ಮರಾಠಿ ಚಿತ್ರ ವೆಂಟಿಲೇಟರ್ ನಂತರ ತಮ್ಮ ನಿರ್ಮಾಣದ ಎರಡನೇ ಚಿತ್ರ ಸರ್ವಾನ್. ಈ ಬಗ್ಗೆ ಹೇಳಿಕೊಳ್ಳಲು ಖುಷಿಯಾಗುತ್ತಿದೆ ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ