ಕರೀನಾ ಕಪೂರ್ ಪ್ರಶಂಸೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಿಗ್ಗಿ

ಶುಕ್ರವಾರ, 1 ಜುಲೈ 2016 (17:26 IST)
ಪ್ರಿಯಾಂಕಾ ಛೋಪ್ರಾ ನ್ಯಾಷನಲ್ ಮಟ್ಟದಲ್ಲಿ ಹೆಸರುವಾಸಿಯಾಗಿರುವುದರ ಬಗ್ಗೆ ಮೊನ್ನೆ ಬೆಬೋ ಹೊಗಳಿದ್ದಳು. ಗ್ಲೋಬಲ್ ಐಕಾನ್ ನಂತೆ ಮಾರ್ಪಟ್ಟಿರುವ ಪ್ರಿಯಾಂಕಾ ಛೋಪ್ರಾ ಹಾಲಿವುಡ್‌ನಲ್ಲಿ ಉತ್ತಮ ಕೆಲಸ ಮಾಡುತ್ತಿದ್ದಾಳೆ ಅದು ನನ್ನಿಂದ ಸಾಧ್ಯವಿಲ್ಲ ಎಂದಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಿಗ್ಗಿ, ಕರೀನಾ ಕಪೂರ್ ನನಗೆ ಸ್ಪೂರ್ತಿಯಾಗಿದ್ದಾಳೆ. ನಿಜಕ್ಕೂ ಆಕೆಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸುತ್ತೇನೆ ಎಂದಿದ್ದಾರೆ. 

ಉತ್ತಮವಾಗಿ ಕೆಲಸ ಮಾಡಲು ನಾನು ನಿಮ್ಮ ಜತೆಯಾಗುತ್ತೇನೆ ಎಂದು ಮ್ಯಾಗಜೀನ್ ಬಿಡುಗಡೆ ವೇಳೆ ಪ್ರಿ.ಯಾಂಕಾ ತಿಳಿಸಿದ್ದಾರೆ. 
 
ಇನ್ನೂ ಮೊನ್ನೆ ಪಿಗ್ಗಿ ಜಗತ್ತಿನ ಸೆಕ್ಸಿ ಮಹಿಳೆ ಎಂಬ ಪಟ್ಟ ಗಿಟ್ಟಿಸಿಕೊಂಡಿದ್ದರು. ಮೂರನೇ ಬಾರಿಗೆ ಸೆಕ್ಸಿ ಮಹಿಳೆ ಎಂಬ ಸ್ಥಾನ ಪಡೆದಿದ್ದರು. 
ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದ ವೇಳೆ ಕರೀನಾ ಕಪೂರ್ ಪ್ರಿಯಾಂಕಾ ಛೋಪ್ರಾಳನ್ನು ಹೊಗಳಿದ್ದರು. ವಿಶ್ವದ ಎದುರು ತೀವ್ರ ಜಯಗಳಿಸುವ ಹಂಬಲವಿಲ್ಲ ಎಂದಿದ್ದರು.
 
ನನ್ನ ಪ್ರಾಥಮಿಕ ಅಂಶಗಳು ಬೇರೆ ಇವೆ. ಪ್ರಿಯಾಂಕಾ ಛೋಪ್ರಾ ಏನು ಮಾಡಿದ್ದಾಳೆ ಅದು ನನ್ನ ಪ್ರಕಾರ ಅದ್ಫುತವಾದದ್ದು, ನಾನು ಅದನ್ನು ಮಾಡುತ್ತೇನೆ ಎಂದು ನನಗೆ ಅನ್ನಿಸುವುದಿಲ್ಲ. ನಾನು ಪಕ್ಕಾ ಗೃಹಿಣಿಯಾಗಿರಲು ಬಯಸುತ್ತೇನೆ, ನನ್ನ ಜವಾಬ್ದಾರಿಗಳು ಪ್ರಿಯಾಂಕಾಗಿಂತಲೂ ಬೇರೆಯಾಗಿವೆ ಆದ್ದರಿಂದ ನಾನು ಎಲ್ಲವನ್ನು ಬಿಟ್ಟು ಲಾಸ್ ಏಂಜಲೀಸ್ ತೆರೆಳಲು ಸಾಧ್ಯವಿಲ್ಲ. ನನಗೆ ವಿಶ್ವವನ್ನು ಗೆಲ್ಲುವ ಹಂಬಲವಿಲ್ಲ ಎಂದು ಕರೀನಾ ಹೇಳಿದ್ದರು. ಇನ್ನೂ ಪ್ರಿಯಾಂಕಾ ಜತೆಗೆ ಕರೀನಾ ಕಪೂರ್ 2004ರಲ್ಲಿ ತೆರೆ ಕಂಡ ರೋಮ್ಯಾಂಟಿಕ್ ಥ್ರಿಲ್ಲರ್ ಮೂವೀ ಏತರಾಜ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 
 

ವೆಬ್ದುನಿಯಾವನ್ನು ಓದಿ