ನಿರ್ಮಾಪಕ ವಿಕಾಸ್ ಮೋಹನ್ ವಿಧಿವಶ

ಮಂಗಳವಾರ, 31 ಮೇ 2016 (12:53 IST)
ಬಾಲಿವುಡ್ ನಿರ್ಮಾಪಕ ವಿಕಾಸ್ ಮೋಹನ್ ವಿಧಿವಶರಾಗಿದ್ದಾರೆ. ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಅವರು ನಿಧನರಾಗಿರುವುದರ ಬಗ್ಗೆ ವೈದ್ಯರು ತಿಳಿಸಿದ್ದಾರೆ. ಸೋಮವಾರ ಹಾರ್ಟ್ ಅಟ್ಯಾಕ್ ಆಗಿದ್ದರಿಂದ ಅವರನ್ನು ನಿನ್ನೆ ಸಂಜೆ 6:30ಕ್ಕೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು... ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. 
ಸೋಮವಾರ ಹಾರ್ಟ್ ಅಟ್ಯಾಕ್ ಆಗಿತ್ತು.. ಈ ಹಿನ್ನೆಲೆಯಲ್ಲಿ ಅವರನ್ನು ನಿನ್ನೆ ಸಂಜೆ 6:30ಕ್ಕೆ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು... ಆದ್ರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ. 

ಇನ್ನೂ ಈ ಕುರಿತು ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ಬಾಲಿವುಡ್‌ನ ಮಾಧುರಿ ದೀಕ್ಷಿತ್  ಹಾಗೂ ಅಕ್ಷಯ್ ಕುಮಾರ್ ಅಭಿನಯದ ಆರ್ಜೂ ಚಿತ್ರವನ್ನು ನಿರ್ಮಾಣ ಮಾಡಿದ್ದರು. 

ಈ ಹಿನ್ನೆಲೆಯಲ್ಲಿ ಬಾಲಿವುಡ್ ಹಲವು ಸೆಲೆಬ್ರಿಟಿಗಳಾದ ಅಮಿತಾಬ್ ಬಚ್ಚನ್, ರಿಷಿ ಕಪೂರ್, ಹಾಗೂ ಅನುಪಮ್ ಖೇರ್, ಹೃತಿಕ್ ರೋಷನ್, ರಿತೇಶ್ ದೇಶಮುಖ್ ಹಾಗೂ ಕರಣ್ ಜೋಹರ್ ಟ್ವಿಟ್ ಮಾಡಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.
 

ವೆಬ್ದುನಿಯಾವನ್ನು ಓದಿ