ಕಡೆಗೂ ಅಪ್ಪು ಆಸೆ ನೆರವೇರಿತು

ಗುರುವಾರ, 29 ಸೆಪ್ಟಂಬರ್ 2016 (10:53 IST)
ಕನ್ನಡದಲ್ಲಿ ಅಪ್ಪು ಅಂತಲೇ ಫೇಮಸ್ ಆಗಿರೋ ನಟ ಪುನೀತ್ ರಾಜಕುಮಾರ್ ಅವರಿಗೆ ಬಯಸಿದ್ದು ಕಡೆಗೂ ದೊರೆತಿರುವ ಖುಷಿ ಇದೆ. ಕನ್ನಡ ಚಿತ್ರಗಳಲ್ಲಿ ನಟಿಸಿ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿರುವ ಅಪ್ಪುಗೆ, ಸಿನಿಮಾ ವೃತ್ತಿಯನ್ನೇ ದೇವರು ಎಂದು ನಂಬಿದವರು. 'ದೊಡ್ಮನೆ ಹುಡುಗ' ಚಿತ್ರ ಈಗಾಗ್ಲೇ ಸುದ್ದಿ ಮಾಡುತ್ತಿದೆ. ಈ ಚಿತ್ರದಲ್ಲಿ ಅಪ್ಪು ಹಿರಿಯ ನಟ ಅಂಬರೀಷ್ ಜತೆಗೆ ನಟಿಸಿದ್ದಾರೆ. 
cc

ಅಂಬರೀಷ್ ಜತೆಗೆ ನಟಿಸಿರುವುದು ನಟ ಪುನೀತ್ ರಾಜಕುಮಾರ್ ಅವರಿಗೆ ದೊರೆತ ದೊಡ್ಡ ಅವಕಾಶವಂತೆ. ರೆಬಲ್ ಸ್ಟಾರ್ ಅಂಬರೀಷ್ ಸರ್ ಜತೆಗೆ ನಟಿಸಿದ್ದು ಖುಷಿ ಆಗಿದೆ ಎನ್ನುವ ಅವರು, ತುಂಬಾ ವರ್ಷಗಳ ಬಳಿಕ ಈ ಚಿತ್ರದಲ್ಲಿ ಅವರು ಜತೆ ನಟಿಸಿದ್ದು ಖುಷಿಯಾಗಿದೆಯಂತೆ. ಈ ಬಗ್ಗೆ ಅಪ್ಪು ಥ್ರೀಲ್ ಕೂಡ ಆಗಿದ್ರಂತೆ.
 
ಅಂಬರೀಷ್ ಅಂಕಲ್ ಜತೆಗೆ ಇದು ನನ್ನ ಮೊದಲ ಚಿತ್ರ ಎನ್ನುವ ಅಪ್ಪು, ನಮ್ಮ ಕುಟುಂಬದಲ್ಲಿ ಅವರು ಎಲ್ಲರ ಜತೆಗೆ ನಟಿಸಿದ್ದಾರೆ. ನನ್ನ ತಂದೆ ಹಾಗೂ ನನ್ನ ಅಣ್ಣ ಶಿವಣ್ಣ ಹಾಗೂ ರಾಘಣ್ಣ ಜತೆಗೆ ಅಂಬರೀಷ್ ಅಭಿನಯಿಸಿದ್ದರು. ಆದ್ರೆ ನನ್ನ ಜತೆ ಮಾತ್ರ ನಟಿಸಿರಲಿಲ್ಲ ಎನ್ನುವ ಅವರು, ಇದೇ ಮೊದಲ ಬಾರಿಗೆ ಅಂಬರೀಷ್ ಜತೆಗೆ ನಟಿಸಿರುವುದಕ್ಕೆ ಖುಷಿದಂತಿದೆ. ಇದೀಗ ಅವರ ಈ  ಆಸೆ ನೆರವೇರಿದೆಯಂತೆ.

ಅಲ್ಲದೇ ಇನ್ನೂ ಮುಂದೆ ಹಲವು ಚಿತ್ರಗಳಲ್ಲಿ ಅವರ ಜತೆ ಕಾಣಿಸಿಕೊಳ್ಳಬೇಕು ಎಂಬುದು ನಟ ಪುನೀತ್ ಅವರ ಆಸೆ. ದೊಡ್ಮನೆ ಚಿತ್ರದಲ್ಲಿ ಅಂಬರೀಷ್ ಅಂಕಲ್ ಜತೆಗೆ ಸ್ಕ್ರೀನ್ ಶೇರ್ ಮಾಡುತ್ತಿರುವುದು ಸಂತೋಷವಾಗಿದೆ ಅಂತಾರೆ ಪುನೀತ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 
 

ವೆಬ್ದುನಿಯಾವನ್ನು ಓದಿ