ಮುರಳಿಗೆ ನಾಯಕಿಯಾಗ್ತಾರಾ ರಾಧಿಕಾ ಪಂಡಿತ್

ಶನಿವಾರ, 18 ಜೂನ್ 2016 (10:10 IST)
ಸ್ಯಾಂಡಲ್ ವುಡ್ ನಲ್ಲಿ ಶಿವಣ್ಣ ಹಾಗೂ ಶ್ರೀಮುರಳಿ ಕಾಂಬಿನೇಷನ್ ನಲ್ಲಿ ಸಿನಿಮಾ ಬರುತ್ತಿರೋದು ಹಳೆ ಸುದ್ದಿ. ಆದ್ರೆ ಈ ಸಿನಿಮಾದಲ್ಲಿ ಮುರಳಿ ಅವರಿಗೆ ನಾಯಕಿಯಾಗಿ ಯಾರು ಅಭಿನಯಿಸಲಿದ್ದಾರೆ ಅನ್ನೋದು ಬಹು ದಿನಗಳಿಂದ ಚರ್ಚೆ ಆಗುತ್ತಲೇ ಇದೆ. ಈಗಾಗಲೇ ಅನೇಕ ನಾಯಕಿಯರ ಹೆಸರುಗಳು ಇದರಲ್ಲಿ ಕೇಳಿ ಬಂದಿದ್ದವು.ಆದ್ರೀಗ  ಶ್ರೀಮುರಳಿ ಅವರಿಗೆ ರಾಧಿಕಾ ಪಂಡಿತ್ ಅವರು ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.

 
ಈ ಹಿಂದೆ ಉಗ್ರಂ , ರಥಾವರದಂತಹ ಹಿಟ್ ಸಿನಿಮಾಗಳನ್ನು ನೀಡಿರುವ ಶ್ರೀಮುರಳಿ ಇದೀಗ ಶಿವರಾಜ್ ಕುಮಾರ್ ಅವರೊಂದಿಗೆ ಅಭಿನಯಿಸುತ್ತಿದ್ದಾರೆ.

ಇನ್ನು ಶಿವಣ್ಣ ಹಾಗೂ ಮುರಳಿ ಇಬ್ಬರು ಜೊತೆಯಾಗಿ ಅಭಿನಯಿಸುತ್ತಿದ್ದಾರೆ ಅನ್ನೋ ವಿಚಾರವೇ ಅಭಿಮಾನಿಗಳಲ್ಲಿ ಸಾಕಷ್ಟು ಖುಷಿ ಉಂಟು ಮಾಡಿದ್ರೆ ಇದೇ ಸಿನಿಮಾದಲ್ಲಿ ಮುರಳಿ ಅವರಿಗೆ ನಾಯಕಿಯಾಗಿ ರಾಧಿಕಾ ಪಂಡಿತ್ ಅವರು ಅಭಿನಯಿಸುತ್ತಿದ್ದಾರೆ 

ಅನ್ನೋ ಸುದ್ದಿ ಸಿನಿರಸಿಕರಿಗೆ ಇನ್ನಷ್ಟು ಖುಷಿಕೊಟ್ಟಿದೆ. ಆದ್ರೆ ಇದು ಎಷ್ಟರಮಟ್ಟಿಗೆ ನಿಜ ಅನ್ನೋದು ಇನ್ನೂ ಕನ್ಫರ್ಮ್ ಆಗಿಲ್ಲ. ರಾಧಿಕಾ  ಪಂಡಿತ್ ಅವರು ಕೂಡ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ.
 
 ಸದ್ಯ ರಾಧಿಕಾ ಪಂಡಿತ್ ಸಂತು ಸ್ಟ್ರೈಟ್ ಫಾವರ್ಡ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಅದಾದ ಬಳಿಕ ಈ ಚಿತ್ರದಲ್ಲಿ ನಟಿಸಲಿದ್ದಾರಂತೆ. ಅಂದಹಾಗೆ ಈ ಚಿತ್ರಕ್ಕೆ ಉಗ್ರಂಗೆ ಅಸೊಸಿಯೇಟ್ ಆಗಿ ಕೆಲಸ ಮಾಡಿದ್ದ ನರ್ತನ್ ಆಕ್ಷನ್ ಕಟ್ ಹೇಳಿದ್ದಾರೆ. ಜಯಣ್ಣ-ಭೋಗೇಂದ್ರ ನಿರ್ಮಿಸುತ್ತಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ