ಚಂಡಿ ಚಾಮುಂಡಿ ಅವತಾರ ಎತ್ತುತ್ತಿರುವ ರಾಗಿಣಿ - ಪ್ರಿಯಾಮಣಿ

ಶನಿವಾರ, 4 ಅಕ್ಟೋಬರ್ 2014 (10:45 IST)
ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ  ಹಳೆಯ ಚಿತ್ರ ಮತ್ತೆ ಬಿಡುಗಡೆ ಮಾಡುವ ಪದ್ಧತಿ ಇದೆ. ಆದರೆ ಈಗ ಹಳೆಚಿತ್ರಗಳನ್ನು ರೀಮೇಕ್ ಸಹ ಮಾಡುತ್ತಿದ್ದಾರೆ ಚಿತ್ರರಂಗದವರು. ಕೆಲವೊಂದು ಗೆಲುವು ಕಂಡಿದ್ದರೆ ಒಂದಷ್ಟು ಹೇಳಿಕೊಳ್ಳುವಂತಹ ಯಶಸ್ಸು ಪಡೆದಿಲ್ಲ. ಆದರೆ ಕೆಲವು ಸಮಯದಲ್ಲಿ ಹಳೆಯ ಚಿತ್ರದ ಹೆಸರನ್ನು ಮತ್ತೆ ಬಳಸಿಕೊಳ್ಳುವ ಪರಿಪಾಟ .

ಈಗ ಆ ಸಾಲಿಗೆ ಚಂಡಿ ಚಾಮುಂಡಿ ಸೇರ್ಪಡೆ ಆಗಿದೆ. ಆ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಮತ್ತು ಪ್ರಿಯಾಮಣಿ ಅಭಿನಯಿಸುತ್ತಿದ್ದಾರೆ. ಈ ಹೆಸರಿನ ಚಿತ್ರ 30 ವರ್ಷಗಳ ಹಿಂದೆ ಬಿಡುಗಡೆ ಆಗಿತ್ತು. ಆ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಶಂಕರ್ ನಾಗ್, ಜಯಮಾಲ ಮತ್ತು ಪ್ರಭಾಕರ್ ಅವರು ಅಭಿನಯಿಸಿದ್ದರು. ಈಗ ಇದೇ ಹೆಸರಿನ ಚಿತ್ರವನ್ನು ನಿರ್ದೇಶಕ ಎನ್ ಕುಮಾರ್ ನಿರ್ದೇಶನ ಮಾಡುತ್ತಿದ್ದಾರೆ. ಇದು ಮೂರು ಭಾಷೆಗಳಲ್ಲಿ  ಅಂದರೆ ಕನ್ನಡ , ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಸಿದ್ಧವಾಗುತ್ತಿದೆ. 
 
ಈ ಚಿತ್ರ ಹಳೆಯ ಸಿನಿಮಾದ ರೀಮೇಕ್ ಅಲ್ಲ, ಇದರಲ್ಲಿ ಈ ಇಬ್ಬರು ತಾರಾಮಣಿಗಳು ಮುಖ್ಯ ಭೂಮಿಕೆಯಲ್ಲಿ ಇದ್ದಾರೆ ಎಂದು ಚಿತ್ರತಂಡ ತಿಳಿಸಿದೆ. ರಾಗಿಣಿ ಈಗ ಪಂಚ ಭಾಷ ತಾರೆಯಗುತ್ತಿದ್ದಾರೆ, ಆದರೆ ಪ್ರಿಯಾಮಣಿ ಈಗಾಗಲೇ ಪಂಚಭಾಷತಾರೆ ಆಗಿದ್ದಾರೆ. ಮಹಿಳಾ ಪ್ರಧಾನ ಚಿತ್ರ ಆದ ಕಾರಣ ಚಿತ್ರಕ್ಕೆ ಈ ಹೆಸರನ್ನು ಇಡಲಾಗಿದೆಯಂತೆ. ಸದ್ಯಕ್ಕೆ ಯಾರು ಚಂಡಿ ಮತ್ತು ಯಾರು ಚಾಮುಂಡಿ ಎನ್ನುವುದು ತಿಳಿದು ಬಂದಿಲ್ಲ. ಈ ಚಿತ್ರದ ಸ್ಕ್ರಿಪ್ಟ್ ವರ್ಕ್ ನಡೆಯುತ್ತಿದ್ದು, ಶೂಟಿಂಗ್ ಸದ್ಯದಲ್ಲೇ ನಡೆಯಲಿದೆ ಎಂದಿವೆ ಮೂಲಗಳು. 

ವೆಬ್ದುನಿಯಾವನ್ನು ಓದಿ