ತಮಿಳುನಾಡು ಮುಖ್ಯಮಂತ್ರಿಯ ಸ್ಥಾನಕ್ಕೆ ರಜನಿಕಾಂತ್ ಸ್ಪರ್ಧೆ?

ಬುಧವಾರ, 1 ಅಕ್ಟೋಬರ್ 2014 (09:08 IST)
ಸೂಪರ್ ಸ್ಟಾರ್ ರಜನಿಕಾಂತ್ ಅವರು ಮುಖ್ಯಮಂತ್ರಿ ಸ್ಥಾನದ ಅಭ್ಯರ್ಥಿಯಾಗಲು ಸಿದ್ಧತೆ ನಡೆಸಿದ್ದಾರಾ? ಹೌದು ಎಂದು ಹೇಳುತ್ತಿದ್ದೆ ತಮಿಳು ನಾಡಿನ ಮೂಲಗಳು. ಏಕೆಂದರೆ ಸೂಪರ್ ಸ್ಟಾರ್ ರಜನಿಕಾಂತ್ ಅವರು ರಾಜಕೀಯಕ್ಕೆ ಬರಲಿ ಎಂದು ಅನೇಕಾನೇಕ ಕಾಲದಿಂದ ಆಶಿಸುತ್ತಾ ಇದ್ದಾರೆ ಅವರ ಅಭಿಮಾನಿಗಳು. 

ಅವರು ರಾಜಕೀಯಕ್ಕೆ ಬಂದು ಒಳ್ಳೆಯ ರಾಜಕೀಯ ಸೇವೆ ನೀಡಲಿ ಎನ್ನುವ ಆಶಯ ಹೊಂದಿದ್ದಾರೆ ಅವರ ಅಭಿಮಾನಿಗಳು. ಆದರೆ ಪ್ರತಿಬಾರಿಯೂ ಅವರು ಈ ಆಫರ್ ತಿರಸ್ಕರಿಸುತ್ತಾ ಬಂದಿದ್ದಾರೆ. ರಾಜಕೀಯದಲ್ಲಿ ಬೆಳೆಯುವ ಉದ್ದೇಶ ಇಲ್ಲ ಎನ್ನುವ ಅಭಿಪ್ರಾಯ ವ್ಯಕ್ತ ಪಡಿಸುತ್ತಾ ಬಂದಿದ್ದಾರೆ ರಜನಿ. ಇತ್ತೀಚಿಗೆ ತಮಿಳು ನಾಡು ಮುಖ್ಯಮಂತ್ರಿ ಜಯಲಲಿತಾ ಅವರನ್ನು ಅರೆಸ್ಟ್ ಮಾಡಿದ ಕಾರಣ ರಜನಿ ರಾಜಕೀಯಕ್ಕೆ ಬರಬೇಕೆಂಬ ಕೂಗು ಈಗ ತುಂಬಾ ಶಕ್ತಿ ಪಡೆದಿದೆ ಎಂದೇ ಹೇಳ ಬಹುದಾಗಿದೆ. ಅಮ್ಮ ಅರೆಸ್ಟ್ ಆದ ಬಳಿಕ ತಮಿಳು ರಾಜಕೀಯ ಮಾಧ್ಯಮಗಳಲ್ಲಿ ನಡೆಸುತ್ತಿರುವ ಚರ್ಚೆಗಳಲ್ಲಿ ಈ ಸಂಗತಿ ಹೆಚ್ಚಾಗಿ ಕೇಳಿ ಬರುತ್ತಿದೆ. 
 
ರಜನಿ ಅಭಿಮಾನಿಗಳು ಸಹ ತಲೈವಾ ರಾಜಕೀಯಕ್ಕೆ ಬರಲು ಇದೆ ಸರಿಯಾದ ಸಮಯ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ರಜನಿ ಯಾವುದೇ ಬಗೆಯ ಮಾತನ್ನು ಹೇಳದೆ, ಅಭಿಪ್ರಾಯ ವ್ಯಕ್ತ ಪಡಿಸದೇ ಇರುವುದರಿಂದ ಪ್ರಾಯಶಃ ಅವರು ರಾಜಕೀಯಕ್ಕೆ ಎಂಟ್ರಿ ಆಗುವ ಎಲ್ಲ ಸಾಧ್ಯತೆಗಳು ಸಹಿತ ಕಂಡು ಬರುತ್ತಿದೆ ಏನೇ ಹೇಳ ಬಹುದಾಗಿದೆ. 63 ರ ಹರೆಯದ ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ತಮ್ಮನ್ನು ಸಮರ್ಪಿಸಿಕೊಳ್ತಾರಾ? ಇಲ್ಲವಾ ? ಎನ್ನುವ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಪ್ರಸ್ತುತ ರಜನಿಕಾಂತ್ ಲಿಂಗಾ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದಾರೆ. ಮುಖ್ಯವಾಗಿ ಜಯಲಲಿತಾ ಅವರು ಮೋದಿ ಅವರ ಜೊತೆ ಹೊಂದಾಣಿಕೆ ಮಾಡಿಕೊಳ್ಳದೆ ಇದ್ದುದರ ಪರಿಣಾಮ ಈ ರೀತಿ ಪ್ರಕಟ ಆಗ್ತಾ ಇದ್ಯಾ? ಈ ಎಲ್ಲ ಪ್ರಶ್ನೆಗಳಿಗೂ ಕಾಲವೇ ಉತ್ತರ ಹೇಳಬೇಕು ಮತ್ತು ಹೇಳುತ್ತದೆ!! 

ವೆಬ್ದುನಿಯಾವನ್ನು ಓದಿ