ಬಾಕ್ಸ್ ಆಫೀಸ್‌ನಲ್ಲಿ 200 ಕೋಟಿ ಗಳಿಕೆ ಕಂಡ 'ಕಬಾಲಿ' ಚಿತ್ರ

ಬುಧವಾರ, 27 ಜುಲೈ 2016 (12:22 IST)
ಬಾಕ್ಸ್ ಆಫೀಸ್‌ನಲ್ಲಿ 'ಕಬಾಲಿ' ಚಿತ್ರ 200 ಕೋಟಿ ಗಳಿಕೆ ಕಾಣುವುದರ ಮೂಲಕ ಮುನ್ನುಗ್ಗುತ್ತಿದೆ. 'ಎಥಿರನ್' ಚಿತ್ರದ ಬಳಿಕ ಕಬಾಲಿ ಚಿತ್ರ ರಜನಿಕಾಂತ್ ಅವರ ಪ್ರಮುಖ ಸ್ಥಾನ ಪಡೆದ ಚಿತ್ರವಾಗಿದೆ.  ತೆರೆ ಕಂಡ ಐದು ದಿನದಲ್ಲೇ ದಕ್ಷಿಣ ಭಾರತದಲ್ಲಿ 200 ಕೋಟಿ ಗಳಿಕೆ ಕಾಣುವುದರ ಮೂಲಕ ಕಬಾಲಿ ಚಿತ್ರ ಪ್ರೇಕ್ಷಕರ ಗಮನ ಸೆಳೆಯುತ್ತಿದೆ.


ಭಾರತೀಯ ಚಿತ್ರಜಗತ್ತಿನಲ್ಲಿ 200 ಕೋಟಿ ಗಳಿಕೆ ಕಾಣುವುದರ ಮೂಲಕ ಪ್ರಮುಖ ಸ್ಥಾನ ಪಡೆದ ಚಿತ್ರ ಇದಾಗಿದೆ. ಮಂಗಳವಾರದಂದು ಕಬಾಲಿ ಚಿತ್ರ 205 ಕೋಟಿಯಷ್ಟು ಗಳಿಕೆ ಕಂಡಿತ್ತು. ಮೊದಲ ವಿಕೆಂಡ್‌ನಲ್ಲಿ 100 ಕೋಟಿ ಗಳಿಕೆ ಕಂಡಿದ್ದ ಕಬಾಲಿ, ಇದು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಉತ್ತಮ ಬೆಳವಣಿಗೆ ಎಂದು ಹೇಳಲಾಗುತ್ತಿದೆ. 
 
ಪಾ ರಂಜಿತ್ ನಿರ್ದೇಶನದ ಕಬಾಲಿ ಚಿತ್ರ ಹಿಂದಿ,ತೆಲಗು ಹಾಗೂ ತಮಿಳಲ್ಲಿ ತೆರೆ ಕಾಣುತ್ತಿದೆ. 

ಇನ್ನೂ ರಜನಿಕಾಂತ್ ಅಮೇರಿಕಾದಿಂದ ಭಾರತಕ್ಕೆ ವಾಪಸ್ ಆಗಿದ್ದಾರೆ. ರಜನಿ ಕೆಲ ದಿನಗಳಿಂದ ಅಮೇರಿಕಾಕ್ಕೆ ಹಾರಿದ್ದರು. ಕಬಾಲಿ ರಿಲೀಸ್ ವೇಳೆ ಅವರು ಭಾರತದಲ್ಲಿ ಇರಲಿಲ್ಲ. ಜುಲೈ 21ರಂದು ರಜನಿಕಾಂತ್ ಕಬಾಲಿ ಚಿತ್ರವನ್ನು ಅಮೇರಿಕಾದಲ್ಲೇ ವೀಕ್ಷಣೆ ಮಾಡಿದ್ದರು.
 
ಅಗಸ್ಟ್ ಮೊದಲ ವಾರದಂದು ರಜನಿಕಾಂತ್ 2.0 ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ. ಈ ಚಿತ್ರದಲ್ಲಿ ನಟ ಅಕ್ಷಯ್ ಕುಮಾರ್ ಜತೆಗೆ ಮೊದಲ ಬಾರಿಗೆ ರಜನಿಕಾಂತ್ ಸ್ಕ್ರೀನ್ ಶೇರ್ ಮಾಡಿಕೊಳ್ಳಲಿದ್ದಾರೆ. ರಜನಿಕಾಂತ್ 2.0 ಚಿತ್ರದ ಶೂಟಿಂಗ್ ಅದಷ್ಟು ಮುಗಿಸುವುದಕ್ಕೆ ಕಾಯುತ್ತಿದ್ದಾರೆ. ಯಾಕಂದರೆ ಅವರ ಮುಂದಿನ ಚಿತ್ರ ಮೋರ್ಯಾಕೋ ಚಿತ್ರದಲ್ಲಿ ಬ್ಯೂಸಿಯಾಗಲಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
 

ವೆಬ್ದುನಿಯಾವನ್ನು ಓದಿ