ಸನ್ನಿ ಲಿಯೋನ್ ಳನ್ನು ದೇಶದಿಂದ ಓಡಿಸ್ತಾಳಂತೆ ರಾಖಿ ಸಾವಂತ್

ಮಂಗಳವಾರ, 21 ಏಪ್ರಿಲ್ 2015 (11:10 IST)
ಕೋಪಕ್ಕೆ ಕಾರಣಗಳೇ ಬೇಕಿಲ್ಲ. ಅದರಲ್ಲೂ ಐಟಂ ನಂಬರ್ ರಾಖಿ ಸಾವಂತ್ ಗಂತೂ ಕೋಪ ಮಾಡಿಕೊಳ್ಳಲು ಕಾರಣ ಇಲ್ಲವೇ ಇಲ್ಲ. ಎಲ್ಲ ವಿಷಯಕ್ಕೂ ಕೋಪ ಮಾಡಿಕೊಳ್ಳುತ್ತಾ ವಿವಾದ ಸೃಷ್ಟಿ ಮಾಡುತ್ತಿರುತ್ತಾಳೆ. ಈಗ ತಿಳಿದು ಬಂದ ಸಂಗತಿ ಅಂದ್ರೆ ಆಕೆಗೆ ಮತ್ತೆ ಕೋಪ ಬಂದಿದೆ. ಆದರೆ ಆ ಕೋಪವನ್ನು ನಿಯಂತ್ರಿಸಿ ಕೊಳ್ಳಲಾಗದ ತನ್ನ ಅಸಹನೆ, ಅಸಹಾಯಕತೆಯನ್ನು ಮಾಧ್ಯಮಗಳ ಮುಂದೆ ತೋರಿಸಿದ್ದಾಳೆ. 

ರಾಖಿಗೆ ಆ ಪರಿ ಕೋಪ ಬರಲು ಕಾರಣ ಸನ್ನಿ ಲಿಯೋನ್. ಒಂದರ್ಥದಲ್ಲಿ ಫ್ರಸ್ಟ್ರೇಷನ್ ಗೆ ಒಳಗಾಗಿದ್ದಾಳೆ ಎಂದೇ ಹೇಳ ಬಹುದಾಗಿದೆ. ಸನ್ನಿ ಲಿಯೋನ್ ತನ್ನ ಆ ಫ್ರಸ್ಟ್ರೇಷನ್ ನ್ನು ಸೆಕ್ಸಿ ಭಾಮೆ ಸನ್ನಿ ಲಿಯೋನ್ ಮೇಲೆ ತೋರಿಸಿದ್ದಾಳೆ. ರಾಖಿ ಪರೋಕ್ಷವಾಗಿ ತಾನು ಸನ್ನಿಯನ್ನು ಈ ದೇಶದಿಂದ ಹೊರಕಳಿಸುವುದಾಗಿ ಹೇಳಿದ್ದಾಳೆ.
 
ಈಗ ಈ ಸುದ್ದಿ ಹೆಚ್ಚಿನ ಮಹತ್ವ ಪಡೆದುಕೊಂಡಿದೆ. ಈ ಮೂಲಕ ಮತ್ತೆ ಬಾಲಿವುಡ್ ಸಿನಿಮಾ ಇಂಡಸ್ಟ್ರಿಯವರ ಕಣ್ಣಿಗೆ ಬೀಳುತ್ತಿದ್ದಾಳೆ ಸೆಕ್ಸ್ ಬಾಂಬ್ ರಾಖಿ. ತನ್ನ ಎಲ್ಲಾ ಅವಕಾಶಗಳನ್ನು ಸನ್ನಿ ಲಿಯೋನ್ ಪಡೆಯುತ್ತಿರುವುದು ಇದಕ್ಕೆ ಕಾರಣವಾಗಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವ ಸತ್ಯವಾಗಿದೆ.
 
ಒಟ್ಟಾರೆ ಪ್ರೇಮ, ಮದುವೆ ಸ್ವಯಂವರ, ಆ ಬಳಿಕ ಇನ್ನು ಅನೇಕಾನೇಕ ಸಂಗತಿಗಳ ವಿಷಯಗಳ ಮೂಲಕ ಜನರ ಗಮನ ಸೆಳೆದಿದ್ದ ರಾಖಿ ಈಗ ಸನ್ನಿಯನ್ನು ದೇಶದಿಂದ ಹೊರಗಟ್ಟುವ ಪ್ರತಿಜ್ಞೆ ಮಾಡುವುದರ ಮೂಲಕ ಮತ್ತೊಮ್ಮೆ ಮಾಧ್ಯಮಗಳ ಬಾಯಿಗೆ ಆಹಾರವಾಗಿದ್ದಾಳೆ.

ವೆಬ್ದುನಿಯಾವನ್ನು ಓದಿ