ದುಡ್ಡಿಗಾಗಿ ಹೀಗೆ ಮಾಡಿದೆ ಎಂದ ರಾಖಿ ಸಾವಂತ್

ಶನಿವಾರ, 16 ಡಿಸೆಂಬರ್ 2023 (10:08 IST)
ನಾಲಿಗೆ ಮೇಲೆ ಹಿಡಿತ ಇಲ್ಲದಂತೆ ಮಾತಾಡಿ ವಿವಾದಕ್ಕೆ ಗುರಿಯಾಗುವುದು ರಾಖಿ ಶೈಲಿ. ಈ ಹಿಂದೆ ಸ್ವಯಂವರ ಎಂಬ ಕಾರ್ಯಕ್ರಮ ನಡೆಸಿ ಅದಲ್ಲಿ ಅನಿವಾಸಿ ಭಾರತೀಯ ಇಲೇಶ್ ಪರುಜುವಾಲಾ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದಳು.
 
ಅವನೇ ನನ್ನ ಗಂಡ ಎಂದು ಹೇಳಿಕೊಂಡಿದ್ದಳು. ನಿಶ್ಚಿತಾರ್ಥ ಆಗಿ ಕೆಲವು ತಿಂಗಳು ಕಳೆಯುತ್ತಿದ್ದಂತೆ ರಾಖಿ ಕೈಎತ್ತಿದ್ದಳು. ಇದೆಲ್ಲಾ ಮಾಡಿದ್ದು ದುಡ್ಡಿಗಾಗಿ ಎಂದು ರಾಖಿ ಸಾವಂತ್ ಒಪ್ಪಿಕೊಂಡಿದ್ದಾಳೆ. ಫ್ಲಾಟ್ ಒಂದನ್ನು ಖರೀದಿಸಬೇಕಾಗಿತ್ತು. ದುಡ್ಡಿರಲಿಲ್ಲ. ಹಾಗಾಗಿ ಹೀಗೆ ಮಾಡಿದೆ ಎನ್ನುತ್ತಿದ್ದಾಳೆ.
 
ಬಾಲಿವುಡ್‌ನಲ್ಲಿ ವಿವಾದಾತ್ಮಕ ರಾಣಿ ಎಂದೇ ಕರೆಸಿಕೊಂಡಿರುವ ರಾಖಿ ಸಾವಂತ್‌ಗೆ ಮಾಧ್ಯಮಗಳನ್ನು ಸೆಳೆಯುವುದು ಹೇಗೆ ಎಂಬ ವಿದ್ಯೆ ಚೆನ್ನಾಗಿ ಗೊತ್ತು. ಏನೋ ಬೋಲ್ಡ್ ಆಗಿ ಮಾತಾಡಿ ಆಗಾಗ ಸುದ್ದಿಯಾಗುತ್ತಿರುತ್ತಾರೆ. 
 
ಸುಖಾ ಸುಮ್ಮನೆ ಮದುವೆಯಾಗಿ ಆಮೇಲೆ ವಿಚ್ಛೇದನ ನೀಡುವುದು ಸರಿಯಲ್ಲ. ಹಾಗಾಗಿ ಅದನ್ನು ನಿಶ್ಚಿತಾರ್ಥದಲ್ಲೇ ಮುಗಿಸಿದೆ ಎಂದಿದ್ದಾರೆ. ಪಾಪ ಇಲೇಶ್ ಒಳ್ಳೇಯವರು. ನನ್ನಿಂದ ಅವರಿಗೆ ತೊಂದರೆ ಆಗುವುದು ಬೇಡ ಎಂದು ಈಗ ರಾಖಿ ತಿಪ್ಪೆ ಸಾರಿಸುವ ಕೆಲಸ ಮಾಡಿದ್ದಾರೆ. ಈ ರೀತಿಯ ತಿಕ್ಕಲುತನದಿಂದ ರಾಖಿಯನ್ನು ಯಾರೂ ವರಿಸಲು ಮುಂದೆ ಬರುತ್ತಿಲ್ಲ.   

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ