ಶಿವಣ್ಣ, ಕಿಚ್ಚನ ಸಿನಿಮಾದ ಮೂಲಕ ರೀ ಎಂಟ್ರಿಯಾಗ್ತಾರಾ ರಕ್ಷಿತಾ?

ಮಂಗಳವಾರ, 9 ಫೆಬ್ರವರಿ 2016 (11:32 IST)
ಶಿವಣ್ಣ ಹಾಗೂ ಸುದೀಪ್ ಅಭಿನಯಿಸುತ್ತಿರುವ ಸಿನಿಮಾದ ಟೈಟಲ್ ಲಾಂಚ್ ಆದ ದಿನವೇ ಸಿನಿಮಾದಲ್ಲಿ ಇವರಿಬ್ಬರ ಜೊತೆ ಕ್ರೇಜಿ ಕ್ವೀನ್ ರಕ್ಷಿತಾ ಅಭಿನಯಿಸುತ್ತಾರೆ ಅನ್ನೋ ಬಗ್ಗೆ ಮಾತುಗಳು ಕೇಳಿ ಬಂದಿದ್ದವು. ಇದೀಗ ಇದೇ ಮಾತು ಗಾಂಧೀನಗರದ ಗಲ್ಲಿಗಳಲ್ಲಿ ಹರಿದಾಡ್ತಿದೆ.


 
ವಿವಾಹದ ಬಳಿಕ ರಕ್ಷಿತಾ ಮನೆ ಸಂಸಾರ, ನಿರ್ಮಾಣ ಅಂತಾ ಬ್ಯುಸಿಯಾಗಿದ್ದಾರೆ. ಕೆಲವೊಂದು ಕಿರುತೆರೆ ಶೋಗಳಲ್ಲಿ ನಿರೂಪಣೆ, ಜಡ್ಜ್ ಮುಂತಾದ ಸ್ಥಾನಗಳನ್ನು ನಿರ್ವಹಿಸುತ್ತಾ ಸಿನಿಮಾದಿಂದ ಕೊಂಚ ದೂರವಾಗಿದ್ದರು ರಕ್ಷಿತಾ. ಆದ್ರೆ ರಕ್ಷಿತಾ ಮತ್ತೆ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಅನ್ನೋ ಮಾತುಗಳು ಈಗ ಸ್ಯಾಂಡಲ್ ವುಡ್ ನಲ್ಲಿ ಕೇಳಿ ಬರ್ತಿದೆ. ಅದರಲ್ಲೂ ಪತಿ ಪ್ರೇಮ್ ನಿರ್ದೇಶಿಸುತ್ತಿರುವ ಮಲ್ಟಿ ಸ್ಟಾರ್ ಸಿನಿಮಾ ಕಲಿಯಲ್ಲಿ ರಕ್ಷಿತಾ ಕಿಚ್ಚ ಸುದೀಪ್ ಹಾಗೂ ಶಿವಣ್ಣ ಜೊತೆ ಅಭಿನಯಿಸುತ್ತಾರೆ ಅನ್ನೋದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
 
ಆದ್ರೆ ಸಿನಿಮಾದಲ್ಲಿ ರಕ್ಷಿತಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ಬದಲಿಗೆ ಅತಿಥಿ ಪಾತ್ರವೊಂದರಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನಲಾಗ್ತಿದೆ. ರಕ್ಷಿತಾ  ಸಿನಿಮಾದಲ್ಲಿ ಅಭಿನಯಿಸುತ್ತಾರೋ ಇಲ್ವೋ ಗೊತ್ತಿಲ್ಲ.ಆದ್ರೆ ಸದ್ಯ ಸುದ್ದಿಯಿಂದ ರಕ್ಷಿತಾ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ನಟಿಯನ್ನು ಬೆಳ್ಳಿ ತೆರೆಯ ಮೇಲೆ ನೋಡುವ ಕಾತರ ಹೆಚ್ಚಾಗಿರೋದಂತು ಸುಳ್ಳಲ್ಲ.
 

ವೆಬ್ದುನಿಯಾವನ್ನು ಓದಿ