ಮತ್ತೆ ಟ್ವಿಟರ್ ನಲ್ಲಿ ರಾಂಗೋಪಾಲ್ ವರ್ಮಾ ಸದ್ದು

ಸೋಮವಾರ, 31 ಅಕ್ಟೋಬರ್ 2016 (10:28 IST)
ಮುಂಬೈ: ಬಾಲಿವುಡ್ ನಿರ್ದೇಶಕ ರಾಂಗೋಪಾಲ್ ವರ್ಮಾ ಟ್ವಿಟರ್ ನಲ್ಲಿ ವಿವಾದಾತ್ಮಕ ಟ್ವೀಟ್ ಮಾಡುವುದು ಹೊಸತೇನಲ್ಲ. ಈ ಬಾರಿ ಅವರ ಕಾಕ ದೃಷ್ಟಿ ಬಿದ್ದಿರುವುದು ಮಾಜಿ ಪ್ರಧಾನಿಗಳ ಮೇಲೆ.

ಮಾಜಿ ಪ್ರಧಾನಿಗಳಾದ ಅಟಲ್ ಬಿಹಾರಿ ವಾಜಪೇಯಿ, ಪಿ ವಿ ನರಸಿಂಹರಾವ್ ಮತ್ತು ಚಂದ್ರಶೇಖರ್ ಅವರು ಸೋನಿಯಾ ಗಾಂಧಿ ಹಿಂದೆ ಕುಳಿತು ನಗುತ್ತಿರುವ ಫೋಟೋ ಪ್ರಕಟಿಸಿ “ಹಿಂದಿನ ಸಾಲಿನಲ್ಲಿರುವವರು ಎಲ್ಲಿಯೇ ಆಗಿದ್ದರೂ ದುಷ್ಟರು. ಫೋಟೋದಲ್ಲಿರುವವರು ಯಾರೆಂಬುದು ಗೊತ್ತಿಲ್ಲ. ಆದರೆ ಗೌರವಾನ್ವಿತ ಮಹಿಳೆಯ ಬಗ್ಗೆ ಏನೋ ಕೊಳಕು ಜೋಕ್ ಮಾಡುತ್ತಿದ್ದಾರೆ. ಪೊಲೀಸರು ಕೂಡಲೇ ತನಿಖೆ ಮಾಡಬೇಕು” ಎಂದು ತಲೆಬುಡವಿಲ್ಲದ ಟ್ವೀಟ್ ಮಾಡಿದ್ದಾರೆ.

ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ. ಹಿಂದೊಮ್ಮೆ ರಜನೀಕಾಂತ್ ಬಗ್ಗೆಯೂ ಅವರು ವಿವಾದಾತ್ಮಕವಾಗಿ ಟ್ವೀಟ್ ಮಾಡಿ ಅವರ ಅಭಿಮಾನಿಗಳಿಂದ ಸರಿಯಾಗಿ ಜಾಡಿಸಿಕೊಂಡಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ