ಮುಂಬೈ: ಸದಾ ವಿವಾದಾತ್ಮಕ ಟ್ವೀಟ್ ಗಳಿಂದಲೇ ಸುದ್ದಿಯಾಗುವ ರಾಮ್ ಗೋಪಾಲ್ ವರ್ಮಾ ಕಣ್ಣು ಇದೀಗ ಕನ್ನಡಿಗರ ಮೇಲೆ ಬಿದ್ದಿದೆ.
ಕನ್ನಡಿಗರಿಗೆ ಭಾಷಾಭಿಮಾನವೇ ಇಲ್ಲ ಎನ್ನುವ ಮೂಲಕ ಸ್ವಾಭಿಮಾನ ಕೆರಳಿಸಿದ್ದಾರೆ. ಬಾಹುಬಲಿ ಚಿತ್ರ ತೆಲುಗು ಅವತರಣಿಕೆಯಾದರೂ, ಕರ್ನಾಟಕದಲ್ಲಿ ಯಶಸ್ಸು ಗಳಿಸಿರುವುದಕ್ಕೆ ಅವರು ವಿವಾದಾತ್ಮಕ ಟ್ವೀಟ್ ಮಾಡಿದ್ದಾರೆ.
ಸರಣಿ ಟ್ವೀಟ್ ಮಾಡಿದ ಅವರು ಕನ್ನಡದ ಕೆಲವು ಹೋರಾಟಗಾರರು ಕರ್ನಾಟಕದಲ್ಲಿ ಡಬ್ಬಿಂಗ್ ಚಿತ್ರಗಳು ಬೇಡವೆಂದು ವಾದಿಸುತ್ತಾರೆ. ಆದರೆ ಇದೇ ಕನ್ನಡಿಗರು ತೆಲುಗು ಬಾಹುಬಲಿ ಚಿತ್ರವನ್ನು ಅತೀ ದೊಡ್ಡ ಯಶಸ್ವೀ ಚಿತ್ರವಾಗಿಸಿದ್ದಾರೆ.
ಹೀಗಾಗಿ ಪರಭಾಷಾ ಚಿತ್ರಗಳನ್ನು ವಿರೋಧಿಸುವ ಕನ್ನಡಿಗರು, ಪರಭಾಷಾ ಚಿತ್ರವನ್ನು ಇಷ್ಟಪಡುವ ಕನ್ನಡಿಗರ ಕ್ಷಮೆ ಕೇಳಬೇಕು. ಕನ್ನಡಿಗರಿಗೆ ಭಾಷೆ ಮುಖ್ಯವಲ್ಲ. ಉತ್ತಮ ಚಿತ್ರವಷ್ಟೇ ಮುಖ್ಯ. ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ ಎಂದು ವಿವಾದಾತ್ಮಕವಾಗಿ ಟ್ವೀಟ್ ಮಾಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ