ರಾಖಿ ಕಟ್ಟದೆಯೇ ದರ್ಶನ್‌ಗೆ ರಕ್ಷಾ ಬಂಧನದ ಶುಭಕೋರಿದ ನಟಿ ಸೋನಲ್ ಮೊಂಥೆರೋ

Sampriya

ಶನಿವಾರ, 9 ಆಗಸ್ಟ್ 2025 (18:25 IST)
Photo Credit X
ಬೆಂಗಳೂರು: ನಟಿ ಸೋನಲ್ ಮೊಂಥೆರೋ ರಕ್ಷಾ ಬಂಧನ ಹಿನ್ನೆಲೆ ನಟ ದರ್ಶನ್‌ಗೆ ಹ್ಯಾಪಿ ರಕ್ಷಾ ಬಂಧನ ಬ್ರೋ ಎಂದು ರಾಖಿ ಕಟ್ಟದೇನೆ ಸಾಮಾಜಿಕ ಜಾಲತಾಣದಲ್ಲಿ ಫೋಟೋವನ್ನು ಹಂಚಿಕೊಂಡು ಶುಭಕೋರಿದ್ದಾರೆ.

ದರ್ಶನ್ ಅವರು ಈ ಹಿಂದೆಯೂ ವೇದಿಕೆಯೊಂದರಲ್ಲಿ ಸೋನಲ್ ಅವರು ನನಗೆ ಸಹೋದರಿ ಇದ್ದ ಹಾಗೇ ಹೇಳಿದ್ದರು. ಅದಲ್ಲದೆ ಆಕೆ ಹೆಣ್ಣು ಹುಡುಗಿ ಅನ್ನುವುದಕ್ಕಿಂತ ನಾನು ಆಕೆಯನ್ನು ಹುಡುಗರ ರೀತಿಯೇ ನೋಡಿದ್ದು ಹೆಚ್ಚು. ನಮ್ಮ ಹುಡುಗರ ಗುಂಪಲ್ಲಿ ಇರುವ ಹೆಣ್ಣು ಹುಡುಗಿ ಅಂದರೆ ಸೋನಲ್. 

ದರ್ಶನ್ ಅವರನ್ನು ಸೋದರ ರೀತಿ ಕಾಣುವ ಸೋನಲ್ ಅವರು ಈ ಹಿಂದೆಯೂ ದರ್ಶನ್‌ಗೆ ರಾಖಿ ಕಟ್ಟಿದ್ದರು. ಆ ಪೋಸ್ಟ್‌ ಅನ್ನು ಕೂಡಾ ಸೋನಲ್ ಇದೀಗ ಹಂಚಿಕೊಂಡಿದ್ದಾರೆ. 

ಇನ್ನೂ ತರುಣ್ ಸುಧೀರ್ ಹಾಗೂ ಸೋನಲ್ ಪ್ರೀತಿ, ಮದುವೆಗೆ ಅಡಿಪಾಯ ಹಾಕಿದ್ದೇ ದರ್ಶನ್ ಎಂದು ಈ ಜೋಡಿ ಹೇಳಿಕೊಂಡಿತ್ತು. ರಾಬರ್ಟ್ ಸಿನಿಮಾ ಸಮಯದಲ್ಲಿ ನಮ್ಮಿಬ್ಬರ ಬಗ್ಗೆ  ಅವರು ಶುರು ಮಾಡಿದ ತಮಾಷೆ ಅದು ಸೀರಿಯಸ್ ಆಗುತ್ತಲೇ ಹೋಯಿತು. ಅವರು ನಮ್ಮ ಪೋಷಕರಲ್ಲಿ ಈ ವಿಚಾರವನ್ನು ಹೇಳಿದ್ದು ಉಂಟು. 

ನಮ್ಮ ಪ್ರೀತಿ, ಮದುವೆಗೆ ಪ್ರಮುಖ ಕಾರಣನೇ ದರ್ಶನ್ ಸರ್ ಎಂದು ತರುಣ್ ಸುಧೀರ್ ಹಾಗೂ ಸೋನಲ್ ಹೇಳಿಕೊಂಡಿದ್ದರುಇ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ