ಇಂದು 'ನಾಗರಹಾವು' ಚಿತ್ರದ ಟೀಸರ್ ಬಿಡುಗಡೆ

ಸೋಮವಾರ, 30 ಮೇ 2016 (14:58 IST)
ನಟಿ ರಮ್ಯಾ-ದೂದ್ ಪೇಡಾ ದಿಗಂತ್ ಅಭಿನಯದ ನಾಗರಹಾವು ಚಿತ್ರದ ಟೀಸರ್ ಇಂದು ಬಿಡುಗಡೆಗೊಳ್ಳಲಿದೆ. ತೆಲಗು ಚಿತ್ರ ಅರುಂಧತಿ ಖ್ಯಾತಿಯ ನಿರ್ದೇಶಕ ಕೋಡಿ ರಾಮಕೃಷ್ಣ ಅವರು ನಿರ್ದೇಶಿಸಿರುವ ನಾಗರಹಾವು ಚಿತ್ರದ ಟೀಸರ್ ಇಂದು ಬಿಡುಗಡೆಯಾಗುತ್ತಿದೆ.

ಬೆಂಗಳೂರಿನ ಕೆ.ಜಿ ರಸ್ತೆಯಲ್ಲಿರುವ ಭೂಮಿಕ ಚಿತ್ರಮಂದಿರದಲ್ಲಿ ಟೀಸರ್ ಬಿಡುಗಡೆ ಕಾರ್ಯಕ್ರಮ ಜರುಗಲಿದೆ.

ಸಂಜೆ 7.30ಕ್ಕೆ ಯು-ಟರ್ನ್ ಚಿತ್ರದ ಪ್ರದರ್ಶನವನ್ನು ರದ್ದುಗೊಳಿಸಿ ಆ ಸಮಯದಲ್ಲಿ ಡಾ. ವಿಷ್ಣುದಾದಾ ಅವರ 201ನೇ ಸಿನಿಮಾ ನಾಗರಹಾವು ಚಿತ್ರದ ಟೀಸರ್‌ನ್ನು ಲೋಕಾರ್ಪಣೆ ಮಾಡಲಾಗುತ್ತದೆ.

ಇನ್ನೂ ಭೂಮಿಕಾ ಚಿತ್ರಮಂದಿರದಲ್ಲಿ ಲೂಸಿಯಾ ಚಿತ್ರದ ಖ್ಯಾತಿ ನಿರ್ದೇಶಕ ಪವನ್‌ಕುಮಾರ್ ಅವರು ಯು-ಟರ್ನ್ ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈಗಾಗ್ಲೇ ಪವನ್ ಕುಮಾರ್ ಅವರ ಅನುಮತಿ ಪಡೆದಿರುವ ನಾಗರಹಾವು ಚಿತ್ರತಂಡ ಟೀಸರ್ ಬಿಡುಗಡೆ ಮಾಡಲಿದೆ. 

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ