ಕತ್ರೀನಾ ಜತೆಗೆ ಸುತ್ತಾಡುತ್ತಿದ್ದ ರಣಬೀರ್ ಕಪೂರ್ ತಮ್ಮ ಸಂಬಂಧ ಬಗ್ಗೆ ಯಾವತ್ತೂ ಬಾಯಿ ಬಿಟ್ಟವರಲ್ಲ. ಆದ್ರೆ ಯಾವಾಗ ಕತ್ರೀನಾ ಜತೆಗಿನ ಸಂಬಂಧ ಬ್ರೇಕ್ ಅಪ್ ಆಯ್ತೋ ಅಂದು ರಣಬೀರ್ ಕಪೂರ್ ಹಾಗೂ ಕತ್ರೀನಾ ಮಧ್ಯದ ಸಂಬಂಧ ತೆರೆ ಬಿದ್ದಿತ್ತು. ಆದ್ರೆ ಕತ್ರೀನಾ ಮೇಲೆ ರಣಬೀರ್ ಯಾವಾಗ ಪ್ರೀತಿ ಆಗಿತ್ತು? ಅವರು ತಮ್ಮ ಜೀವನದಲ್ಲಿ ಯಾಕೆ ಪ್ರಮುಖ ಪಾತ್ರ ವಹಿಸಿದ್ದರು ಎಂಬುದನ್ನು ರಣಬೀರ್ ತಮ್ಮ ಪ್ರೀತಿ ಬಗ್ಗೆ ಬಿಚ್ಚಿಟ್ಟಿದ್ದಾರೆ.
ಖಾಸಗಿ ಮಾಧ್ಯಮಕ್ಕೆ ನೀಡಿದ ಸಂದರ್ಶನದ ವೇಳೆ ರಣಬೀರ್ ಹೀಗೆ ಹೇಳಿದ್ದಾರೆ. 'ಅಜಬ್ ಪ್ರೇಮ್ ಕೀ ಗಜಬ್ ಕಹಾನಿ' ಚಿತ್ರದಲ್ಲಿ ಭಾಗಿಯಾಗಿದ್ದೆ, ಇಬ್ಬರು ಶೂಟಿಂಗ್ ನಲ್ಲಿ ಇದ್ದೇವು, ಈ ವೇಳೆ ಕತ್ರೀನಾ ಹಾಗೂ ನನ್ನ ಮಧ್ಯೆ ಸಾಮೀಪ್ಯ ಹೆಚ್ಚಿತ್ತು. ಅಂದು ರಣಬೀರ್ ದೀಪಿಕಾ ಪಡುಕೋಣೆ ಜತೆಗೆ ಬ್ರೇಕ್ ಅಪ್ ಮಾಡಿಕೊಂಡಿದ್ದರು. ಇತ್ತ ಕತ್ರೀನಾ ಕೂಡ ಸಲ್ಲು ಜತೆಗೆ ಡೇಟ್ ಮಾಡುತ್ತಿದ್ದರು.
ನಿಮ್ಮ ಜೀವನದಲ್ಲಿ ಕತ್ರೀನಾ ಯಾವ ರೀತಿಯ ಪ್ರಮುಖ ಪಾತ್ರ ವಹಿಸುತ್ತಾರೆ ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿರುವ ರಣಬೀರ್, ನನ್ನ ಜೀವನದಲ್ಲಿ ಅಪ್ಪ -ಅಮ್ಮ ಆದ್ಮೇಲೆ ಅದು ಕತ್ರೀನಾಗೆ ಪ್ರಮುಖ ಸ್ಥಾನವಿದೆ. ಆದ್ರೆ ಜನರು ಈ ಮಾತಿನ ಬಗ್ಗೆ ಅರ್ಥಮಾಡಿಕೊಳ್ಳುವುದಿಲ್ಲ. ನಾನು ಅರ್ಥಮಾಡಿಸಿಕೊಳ್ಳುವುದಕ್ಕೂ ರೆಡಿ ಇಲ್ಲ. ಈ ವಿಷ್ಯ ಮೀಡಿಯಾದ ಎದುರು ಮಾರಾಟ ಮಾಡಲು ಇಷ್ಟವಿಲ್ಲ ಎಂದು ತಿಳಿಸಿದರು.