ಮೊನ್ನೆ ತಾನೇ ನಟ ರಣ್ ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಅವರು ತಮ್ಮ ಕುಟುಂಬದೊಂದಿಗೆ ಹಾಲಿಡೇ ಟ್ರಿಪ್ ಗೆ ಆಸ್ಟ್ರೇಲಿಯಾಕ್ಕೆ ಹೋಗಿದ್ದರು. ನಿನ್ನೆ ಟ್ರಿಪ್ ಮುಗಿಸಿ ಇಬ್ಬರೂ ಮುಂಬೈಗಂ ವಾಪಸ್ಸಾಗಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರು ರಣ್ ವೀರ್ ಸಿಂಗ್ ಅವರಲ್ಲಿ ನೀವು ಹಾಗೂ ದೀಪಿಕಾ ಶೀಘ್ರದಲ್ಲಿ ವಿವಾಹವಾಗುತ್ತಿರೋದು ನಿಜಾನಾ ಅಂತಾ ಕೇಳಿದ್ದಾರೆ. ಇದಕ್ಕೆ ರಣ್ ವೀರ್ ಕಾಮಿಡಿ ಉತ್ತರ ನೀಡಿದ್ದಾರೆ.ಬೆಳ್ಳಂಬೆಳಗ್ಗೆ ಏನ್ ಪ್ರಶ್ನೆ ಕೇಳುತ್ತಿದ್ದೀರಿ. ನನಗೆ ಇನ್ನು ನಿದ್ದೆ ಬಿಟ್ಟಿಲ್ಲ. ನಿಮ್ಮ ಪ್ರಶ್ನೆ ಕೇಳಿದ ಬಳಿಕ ನನಗೆ ಗೊತ್ತಾಯ್ತು. ನಾನು ಮುಂಬೈಗೆ ವಾಪಸ್ಸಾಗಿದ್ದೇನೆ ಅಂತಾ ಕಾಮಿಡಿ ಮಾಡಿದ್ದಾರೆ.