ವಿಚಾರಣೆಗೆ ಹಾಜರಾಗಲು ರಣವೀರ್ ಸಿಂಗ್ ಗೆ ನೋಟಿಸ್

ಶನಿವಾರ, 13 ಆಗಸ್ಟ್ 2022 (10:50 IST)
ಮುಂಬೈ: ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಬೆತ್ತಲೆ ಫೋಟೋ ಕಂಟಕ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣುತ್ತಿಲ್ಲ.
 

ಮ್ಯಾಗಜಿನ್ ಒಂದರ ಕವರ್ ಫೋಟೋಗಾಗಿ ಬೆತ್ತಲೆಯಾಗಿ ಪೋಸ್ ನೀಡಿದ್ದ ರಣವೀರ್ ವಿರುದ್ಧ ದೂರುಗಳು ದಾಖಲಾಗಿತ್ತು. ಇದೀಗ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ.

ಮುಂಬೈನ ಚೆಂಬೂರಿನ ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಲು ನೋಟಿಸ್ ನೀಡಲಾಗಿದೆ. ಮುಂಬೈನ ಎನ್ ಜಿಒ ಒಂದು ಕೊಟ್ಟಿರುವ ದೂರಿನ ಆಧಾರದಲ್ಲಿ ನೋಟಿಸ್ ನೀಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ