ಅಕ್ಷಯ್ ಕುಮಾರ್ ರಕ್ಷಾ ಬಂಧನ್ ಗೂ ಸೋಲೇ ಗತಿ

ಶನಿವಾರ, 13 ಆಗಸ್ಟ್ 2022 (08:47 IST)
ಮುಂಬೈ: ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಬಳಿಕ ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್ ಗೂ ಸೋಲೇ ಗತಿಯಾಗಿದೆ. ಇದರೊಂದಿಗೆ ಮತ್ತೊಮ್ಮೆ ಬಾಲಿವುಡ್ ಘಟಾನುಘಟಿಗಳು ಮುಗ್ಗರಿಸಿದ್ದಾರೆ.

ಅಮೀರ್ ಖಾನ್ ಅವರ ಲಾಲ್ ಸಿಂಗ್ ಛಡ್ಡಾ ಮೊದಲ ದಿನ 12 ಕೋಟಿ ಕಲೆಕ್ಷನ್ ಮಾಡಿ ತೀರಾ ಕಳಪೆ ಸಾಧನೆ ಮಾಡಿತ್ತು. ಇದು ಅಮೀರ್ ಖಾನ್ ಗೆ 13 ವರ್ಷಗಳಲ್ಲೇ ಹೀನಾಯ ಸೋಲು.

ಅಕ್ಷಯ್ ಕುಮಾರ್ ಅಭಿನಯದ ರಕ್ಷಾ ಬಂಧನ್ ಕೂಡಾ ಇದೇ ದಿನ ಬಿಡುಗಡೆಯಾಗಿದ್ದು ಇದರ ಸ್ಥಿತಿ ಮತ್ತಷ್ಟು ಹೀನಾಯವಾಗಿದೆ. ಅಕ್ಷಯ್ ಸಿನಿಮಾ ಮೊದಲ ದಿನ ಗಳಿಸಿದ್ದ ಕೇವಲ 8.5 ಕೋಟಿ ರೂ. ಆ ಮೂಲಕ ನೂರಾರು ಕೋಟಿ ಬಾಚುತ್ತಿದ್ದ ಅಕ್ಷಯ್ ಸಿನಿಮಾವೂ ನೆಲಕಚ್ಚಿದೆ. ಪೃಥ್ವಿರಾಜ್ ಸಿನಿಮಾ ಬಳಿಕ ಅಕ್ಷಯ್ ಗೆ ಮತ್ತೊಂದು ಸೋಲು ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ